ಹಿರೇ ವಂಕಲಕುಂಟಾದಲ್ಲಿ ಇಷ್ಟಲಿಂಗ ಪೂಜೆ ನಾಳೆ

RESERVATION POOJA AT ROAD SWAMIJI PANCHAMSALI
BASAVAJAYA MRITNUJAYA SWAMIJI
Published on

ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡಲು ಒತ್ತಾಯಿಸಿ ಸೆ.30ರಂದು ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಬಳಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಗುವುದು.

ಮೂಲಕ ಹೋರಾಟ ಮುಂದುವರೆಸಲಾಗುವುದೆಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅಧಿವೇಶನ ಮುಗಿದು 2 ತಿಂಗಳಾದರೂ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಹೋರಾಟ ಮುಂದುವರೆಸಿದ್ದೇವೆ. ನಿಪ್ಪಾಣಿಯಿಂದ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನಡೆಸುವ ಮೂಲಕ ಹೋರಾಟ ಆರಂಭವಾಗಿದೆ.

ಸೆ.30ರಂದು ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಬಳಿ ಹೆದ್ದಾರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಗುವುದು. ಹಿಂದಿನ ಸರ್ಕಾರ ಮೀಸಲು ನೀಡಲು ವಿಳಂಬ ಮಾಡಿತು.

ಈಗಿನ ಸರ್ಕಾರ ಆದಷ್ಟು ಬೇಗ ನೀಡುವ ವಿಶ್ವಾಸವಿದೆ. 2024ರ ಲೋಕಸಭೆ ಚುನಾವಣೆ ಘೋಷಣೆಯೊಳಗೆ ಮೀಸಲಾತಿ ನಿರ್ಧಾರ ಪ್ರಕಟಿಸಬೇಕು. ಸಮುದಾಯದ ಜನ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿದ್ದಾರೆ.

ಯಾರಿಗೂ ಕಡ್ಡಾಯವಾಗಿ ಹೋರಾಟದಲ್ಲಿ ಭಾಗಿಯಾಗಬೇಕೆಂದು ಹೇಳಿಲ್ಲ. ಅನುಕೂಲವಾದಲ್ಲಿ ಭಾಗಿಯಾಗುವಂತೆ ತಿಳಿಸಿರುವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾವೇರಿ ನೀರಿಗಾಗಿ ಕರೆ ನೀಡಿರುವ ಬಂದ್‌ಗೆ ಬೆಂಬಲ: ಶಾಂತಿಯುತ ಬಂದ್ ನಡೆಸಿ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಜನತೆಗೆ ವಿಶಾಲ ಭಾವನೆ ಇದೆ. ಹೀಗಾಗಿ ನಾಡಿನ ಪ್ರತಿಯೊಂದು ವಿಷಯಗಳಿಗೆ ಸ್ಪಂದಿಸುತ್ತಾರೆ.

ದಕ್ಷಿಣ ಭಾಗದವರು ಈ ಭಾಗದ ನೆಲ, ಜಲ ವಿಷಯಗಳಿಗೆ ಧ್ವನಿ ಎತ್ತಬೇಕಿದೆ. ಎಲ್ಲ ಸರ್ಕಾರಗಳು ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿವೆ.

ಮೀಸಲಾತಿ ಹೋರಾಟ ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆಗಳ ಅನುಷ್ಠಾನ ಹೋರಾಟ ಆರಂಭಿಸುವುದಾಗಿ ಮಾಹಿತಿ ನೀಡಿದರು.

ದೊಡ್ಡ ಸಮುದಾಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಡಿಸಿಎಂ ಸ್ಥಾನ ನೀಡಿದರೆ ತಪ್ಪಿಲ್ಲ.

ರಾಜ್ಯ ಸರ್ಕಾರ ಸಮುದಾಯ ಆಧಾರದಲ್ಲಿ ಡಿಸಿಎಂ ಸ್ಥಾನ ಹೆಚ್ಚಿಸಿದಲ್ಲಿ ಪಂಚಮಸಾಲಿ ಸಮುದಾಯದವರಿಗೂ ಡಿಸಿಎಂ ಮಾಡಲಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net