ಎಡಮುರಿ ಪ್ರವಾಸಿ ತಾಣದಲ್ಲಿ ತಡೆಗೋಡೆ ನಿರ್ಮಾಣ

03-07--krs1 (1)
ಕೆ.ಆರ್.ಸಾಗರ ಅಣೆಕಟ್ಟೆಯ ಸಮೀಪ ಎಡಮುರಿ ಪ್ರವಾಸಿ ತಾಣದಲ್ಲಿ ಪವರ್ ಪ್ಲಾಂಟ್ ನಿರ್ಮಿಸಲು ಹೊರಟ್ಟಿರುವ ವ್ಯಕ್ತಿಯೊಬ್ಬರು ಅಕ್ರಮವಾಗಿ ತಡೆಗೋಡೆ ನಿರ್ಮಿಸುತ್ತಿರುವ ವಿರುದ್ಧ ಗ್ರಾಮಸ್ಥರು ಆಕ್ರೋಶಪಡಿಸಿದರು.
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಯ ಸಮೀಪ ಬಲಮರಿಯಲ್ಲಿರುವ ಎಡಮುರಿ ಪ್ರವಾಸಿ ತಾಣದ ಕಾವೇರಿ ನದಿಯಲ್ಲಿ ಪವರ್ ಪ್ಲಾಂಟ್ ನಿರ್ಮಿಸಲು ಹೊರಟಿರುವ ವ್ಯಕ್ತಿಯೊಬ್ಬರು ಯಾವುದೇ ಗಡಿ ಗುರುತು ಮಾಡದೆ ಅಕ್ರಮವಾಗಿ ನದಿ ಮತ್ತು ರಸ್ತೆಗೆ ತಡೆಗೋಡೆ ನಿರ್ಮಿಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಅಭಿಯಂತರ ಸುರೇಶ್‌ಕುಮಾರ್ ಅವರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು, ನಿಗಮಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ತಡೆಗೋಡೆ ನಿರ್ಮಿಸುತ್ತಿದ್ದರೂ ಸುಮ್ಮನಿದ್ದೀರಿ, ಯಾರ ಪ್ರಭಾವಕ್ಕೆ ಒಳಗಾಗಿದ್ದೀರಿ ಎಂದು ಪ್ರಶ್ನಿಸಿದರು.

ಸಹಾಯಕ ಅಭಿಯಂತರ ಮಾತನಾಡಿ, ಕಾಮಗಾರಿ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ಬೆಳಗೊಳ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್, ತಾಪಂ ಮಾಜಿ ಸದಸ್ಯ ಬಿ.ಟಿ.ಸ್ವಾಮಿಗೌಡ, ಗ್ರಾಪಂ ಸದಸ್ಯ ಪುಟ್ಟರಾಜು, ಮಾಜಿ ಸದಸ್ಯ ಮಂಜನಾಥ್, ಭಾರ್ಗವ, ಪುಟ್ಟೇಗೌಡ, ರಾಮೇಗೌಡ, ಶಿವೇಗೌಡ, ಎಂ.ಬಿ.ಚಂದ್ರು, ಎಂ.ಸಿ.ಚಂದ್ರ, ಶ್ರೀನಿವಾಸ್, ಕೆ.ಆರ್.ಎಸ್ ಗ್ರಾಪಂ ಸದಸ್ಯ ರವಿಕುಮಾರ್, ಹೊಸ ಉಂಡವಾಡಿ ಸಂಜು, ಮಜ್ಜಿಗೆಪುರ, ಬೆಳಗೊಳ, ಕೆ.ಆರ್.ಸಾಗರ, ಹೊಂಗಳ್ಳಿ ಗ್ರಾಮಗಳ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net