

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ನಿಯಮಗಳನ್ನು ರೂಪಿಸಿ ಶೀಘ್ರವಾಗಿ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಪಿಯು ಉಪನ್ಯಾಸಕರ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ಸರ್ಕಾರ ಹೊರಡಿಸಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ನಿಯಮಗಳನ್ನು ರದ್ದು ಮಾಡಲಾಗಿದೆ. ಹಲವಾರು ವರ್ಷಗಳಿಂದ ವರ್ಗಾವಣೆ ಸೂಕ್ತ ಸಮಯಕ್ಕೆ ನಡೆಯುತ್ತಿಲ್ಲ. ಒಂದು ವೇಳೆ ನಡೆದರೂ ಅವೈಜ್ಞಾನಿಕವಾಗಿ ನಡೆಯುತ್ತದೆ. ಇದರಿಂದಾಗಿ 15-20 ವರ್ಷಗಳಿಂದ ಬಹುತೇಕ ಉಪನ್ಯಾಸಕರು ವರ್ಗಾವಣೆ ವಂಚಿತರಾಗಿದ್ದಾರೆ ಎಂದು ಸಂಘ ಆರೋಪ ಮಾಡಿದೆ. ಇದನ್ನೂ ಓದಿ: ‘ನನ್ನ ಮಗ ಈ ಮಣ್ಣಿನ ಕೆಳಗೆ ಮಲಗಿದ್ದಾನೆ’: 45 ದಿನಗಳಿಂದ ಪೆಟ್ಟಿಮುಡಿಯಲ್ಲಿ ಶವ ಹುಡುಕುತ್ತಿರುವ ಅಪ್ಪನ ಕಣ್ಣೀರು
ಮೌಲ್ಯಮಾಪನ ವಿಕೇಂದ್ರೀಕರಣ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಮೌಲ್ಯಮಾಪನ ವಿಕೇಂದ್ರೀಕರಣ ಮಾಡುವಂತೆ ಪಿಯು ಉಪನ್ಯಾಸಕರ ಸಂಘ ಒತ್ತಾಯಿಸಿದೆ. ಸೆ.24 ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಬೆಂಗಳೂರಿನ ಬದಲಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಮೌಲ್ಯಮಾಪನ ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಅಧ್ಯಕ್ಷ ಎ.ಎಚ್. ನಿಂಗೇಗೌಡ ಮನವಿ ಮಾಡಿದ್ದಾರೆ.