ಕೆಎಲ್​ಇ ಟೆಕ್​ ವಿವಿ ಸಂಶೋಧಕರಿಗೆ ಸನ್ಮಾನ

IMG_20251008_205819_360.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಂಟು ಮಂದಿ ಪ್ರಮುಖ ಸಂಶೋಧಕರು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೆವಿಯರ್ ಪ್ರಕಟಿಸಿದ 2025ರ ವಿಶ್ವದ ಟಾಪ್ 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಗೌರವಿಸಲಾಯಿತು.

ಡಾ. ತೇಜರಾಜ್ ಅಮ್ಮಿನಭಾವಿ, ಡಾ. ನಾಗರಾಜ ಶೆಟ್ಟಿ, ಡಾ. ಪ್ರಭುಗೌಡ ಪಾಟೀಲ, ಡಾ. ಶ್ವೇತಾ ಮಾಳೋದೆ, ಡಾ. ಮೋಹನಕೃಷ್ಣ ಗುಂಡ, ಡಾ. ವಿನಾಯಕ ಗಾಯತೊಂಡೆ, ಡಾ. ನಾಗರಾಜ ಬಾಣಾಪೂರಮಠ, ಡಾ. ಶರಣಬಸವ ಗಣಾಚಾರಿ ಅವರನ್ನು ಸನ್ಮಾನಿಸಲಾಯಿತು.

ಸಂಶೋಧಕರನ್ನು ಅಭಿನಂದಿಸಿ ಮಾತನಾಡಿದ ಕೆಎಲ್ಇ ಟೆಕ್ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಇವರ ವಿಶಿಷ್ಟ ಸಂಶೋಧನಾ ಸಾಧನೆಗಳು ಮತ್ತು ವಿಶ್ವಮಟ್ಟದ ಪ್ರಕಟಣೆಗಳು ಕೆಎಲ್ಇ ಟೆಕ್‌ ನ ಬಲಿಷ್ಠ ಸಂಶೋಧನಾ ಸಂಸ್ಕೃತಿಯ ಪ್ರತೀಕವಾಗಿದೆ. ಡಾ. ತೇಜರಾಜ್ ಅಮ್ಮಿನಭಾವಿ ಅವರ ಶ್ರೇಷ್ಠ ಸಂಶೋಧನಾ ಕೊಡುಗೆಗಳು ಮತ್ತು ಅವರು ಯುವ ಸಂಶೋಧಕರಿಗೆ ನೀಡುತ್ತಿರುವ ಮಾರ್ಗದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಕುಲಪತಿ ಡಾ. ಪ್ರಕಾಶ ತೆವರಿ ಹಾಗೂ ಕುಲಸಚಿವ ಡಾ. ಬಸವರಾಜ ಅನಾಮಿ, ವಿಭಾಗಾಧ್ಯಕ್ಷರು ಮತ್ತು ಹಿರಿಯ ಬೋಧಕ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net