

ಬ್ರಹ್ಮದೇವನಮಡು : ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸಂಶೋಧಕ ಶಿವಪ್ಪ ಹಣಮಂತ ಹುಣಚಾಳ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಶಿವಪ್ಪ ಹುಣಚಾಳ ‘ದಲಿತ ಬಂಡಾಯ ಕಥಾ ಸಾಹಿತ್ಯದಲ್ಲಿ ಸಂಸ್ಕೃತ ಸಂಘರ್ಷ’ ಎಂಬ ವಿಷಯ ಕುರಿತು ಮಹಾಪ್ರಬಂಧ ಮಡಿಸಿದ್ದರು. ಅವರಿಗೆ ಕವಿವಿ ಹಿರಿಯ ಪ್ರಾಧ್ಯಾಪಕ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ವೈ. ಮಟ್ಟಿಹಾಳ ಮಾರ್ಗದರ್ಶನ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.