

ಮಂಗಳೂರು: ಬಿಲ್ಲವ ಸಮಾಜದವರು ಹಲವು ನಾಮಂಕಿತಗಳನ್ನು ಹೊಂದಿದ್ದವರು ಆದರೆ ಮೂಲತಃ ಅವರು ಯೋಧ, ಸೈನಿಕರಾಗಿದ್ದವರು. ಈ ಕುರಿತು ವಿಸ್ತಾರವಾದ ಅಧ್ಯಯನದ ಅಗತ್ಯವಿದೆ. ಮಂಗಳೂರು ವಿವಿಯಲ್ಲಿ ಪೂರ್ಣ ರೂಪದಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಕಾರ‌್ಯ ನಿರ್ವಹಿಸಲು ಪಕ್ಷಾತೀತವಾಗಿ ಕೆಲಸ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಭಾನುವಾರ ನಗರದ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸಂಶೋಧಕ ಬಾಬುಶಿವ ಪೂಜಾರಿಯವರ ತಂಡದ ಬಿಲ್ಲವರ ಗುತ್ತು ಬರ್ಕೆಗಳು ಸಂಶೋಧನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಲ್ಲವರ ಗುತ್ತು ಬರ್ಕೆಗಳು ಕೃತಿಯ ಮೂಲಕ ಬಿಲ್ಲವರ ವೈಭವಯುಕ್ತ ಸಮಾಜದ ಪರಿಚಯ ಹೊಸ ಪೀಳಿಗೆಯವರಿಗೆ ಮಾಡಿಕೊಡುವ ಕೆಲಸ ಶ್ಲಾಘನೀಯ. ಇಂತಹ ಇನ್ನಷ್ಟು ಗ್ರಂಥಗಳು ಸಮಾಜದವರಿಗೆ ಸಿಗಬೇಕು. ಸಂಶೋಧಕ ಬಾಬುಶಿವ ಪೂಜಾರಿಯವರ ಅಪ್ರಕಟಿತ ಯಾವುದೇ ಕೃತಿಗಳಿದ್ದರೂ ನಾನು ಮುದ್ರಣ ಮಾಡಿಕೊಡುತ್ತೇನೆ ಎಂದವರು
ಕೃತಿಯನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಬಿಡುಗಡೆಗೊಳಿಸಿದರು.
ಸೋಲೂರು ಆರ‌್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಈ ಕೃತಿಯ ಮೂಲಕ ಸಮಾಜವನ್ನು ಎದ್ದೇಳಿಸುವ ಕಾರ‌್ಯವನ್ನು ಮಾಡಲಾಗಿದೆ. ಸಮಾಜವೊಂದು ಶಾಶ್ವತವಾದ ಅಭಿವೃದ್ಧಿಯಾಗಬೇಕಾದರೆ ದೈವಿಕ ಶಕ್ತಿಯ ಜತೆಯಲ್ಲಿ ಸಾಹಿತಿಗಳ ದಂಡುವಿನ ಅಗತ್ಯ ಕೂಡ ಇರುತ್ತದೆ. ಸಮಾಜದವರು ಇಂತಹ ಕೃತಿಗಳನ್ನು ಓದಿ ಮತ್ತಷ್ಟು ಸಂಶೋಧನಾಯುಕ್ತ ಕೃತಿಗಳು ಹೊರಬರುವಂತೆ ಪ್ರೋತ್ಸಾಹ ಮಾಡಬೇಕು ಎಂದರು.
ಹಿರಿಯ ಸಾಹಿತಿ ಬಿ.ಎಂ. ರೋಹಿಣಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ಕಾರ‌್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ನವೀನ್ ಚಂದ್ರ ಡಿ ಸುವರ್ಣ, ಡಾ. ಗಣೇಶ ಅಮೀನ್ ಸಂಕಮಾರ್, ಎಂ.ವೇದಕುಮಾರ್, ಪ್ರಧಾನ ಸಂಶೋಧಕ ಬಾಬು ಶಿವಪೂಜಾರಿ ಮುಂಬಯಿ, ಶಾಸಕ ಉಮಾನಾಥ್ ಎ ಕೋಟ್ಯಾನ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ವಕೀಲ ಪದ್ಮರಾಜ್ ಆರ್, ಉದ್ಯಮಿ ಊರ್ಮಿಳಾ ರಮೇಶ್ ಕುಮಾರ್, ಗಡಿಪ್ರಧಾನರಾದ ಗೋಪಾಲ ಬಂಗೇರ ಹಲವರು ಇದ್ದರು.
ಸಂಶೋಧನಾ ತಂಡದಲ್ಲಿದ್ದ ದಿ. ತಮ್ಮಯ್ಯರ ಧರ್ಮಪತ್ನಿ ಇಂದುಮತಿ ತಮ್ಮಯ್ಯ ಹಾಗೂ ಬಾಬುಶಿವ ಪೂಜಾರಿ ದಂಪತಿಗಳನ್ನು ಸನ್ಮಾನಿಸಲಾಯಿತು. ರತ್ನಾವತಿ ಬೈಕಾಡಿ ಬಳಗ ಪ್ರಾರ್ಥಿಸಿದರು. ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು. ಶೈಲು ಬಿರ್ವ ವಂದಿಸಿದರು. ನರೇಶ್ ಕುಮಾರ್ ಸಸಿಹಿತ್ಲು ನಿರೂಪಿಸಿದರು.
ಭೂಸುಧಾರಣೆ ಕಾಯಿದೆಯಿಂದ ಬಿಲ್ಲವರ ಸುಧಾರಣೆಯಾಗಿಲ್ಲ
ಬಿಲ್ಲವರ ಜಾತಿ ಹಾಗೂ ವೃತ್ತಿಗೆ ನಿಕಟವಾದ ಸಂಬಂಧವಿದ್ದು, ಈ ನಿಟ್ಟಿನಲ್ಲಿ ಬಿಲ್ಲವ ಸಮಾಜದ ಕುರಿತು ಕುಲಶಾಸೀಯ ಅಧ್ಯಯನದ ಅಗತ್ಯವಿದೆ. ನಾರಾಯಣ ಗುರುಗಳು ಕೇರಳ ಹಾಗೂ ದಕ್ಷಿಣ ಕನ್ನಡದಲ್ಲಿ ಮಾಡಿದ ಕ್ರಾಂತಿಯ ಬಳಿಕ ಯಾವುದೇ ಅಧ್ಯಯನಗಳು ನಡೆದಿಲ್ಲ. ಇದರ ಅಗತ್ಯತೆ ಇದ್ದು, 1974ರಲ್ಲಿ ಭೂಸುಧಾರಣೆ ಕಾಯಿದೆಯಡಿಯಲ್ಲಿ ಬಂದ ಭೂಮಿಯನ್ನು ಪಡೆದ ಬಿಲ್ಲವರ ಪರಿಸ್ಥಿತಿಯಲ್ಲಿ ಏನೂ ಸುಧಾರಣೆಯಾಗಿಲ್ಲ. ನಮ್ಮಘಿಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟುಹಾಕಲು ವಿಲರಾಗಿದ್ದೇವೆ. ಕೇರಳದಲ್ಲಿ ಕಳೆದ 15 ವರ್ಷಗಳಿಂದ ಸಿಎಂ ಸೇರಿದಂತೆ 2 ಶಾಸಕರು ಇಳವರು ಇದ್ದಾರೆ. ಆದರೆ ಕರ್ನಾಟಕದಲ್ಲಿ ಏನಾಗಿದೆ ಎನ್ನುವ ಕುರಿತು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು.