

ಧಾರವಾಡ: ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ 2024-25ನೇ ಸಸ್ಯಶಾಸದಲ್ಲಿ ಸಂಶೋಧನೆ ಮಾಡುವ ಮೂಲಕ ನೂತನ ನಾಲ್ಕು ಪ್ರಬೇಧಗಳನ್ನು ಗುರುತಿಸುವಲ್ಲಿ ಕರ್ನಾಟಕ ವಿವಿ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ ವಿಭಾಗದ ಪ್ರಾಧ್ಯಾಕರ ಪ್ರೊ.ಕೊಟ್ರೇಶ ಕಾಟ್ರಹಳ್ಳಿ ಮತು ಸಂಶೋಧಕರ ತಂಡ ಯಶಸ್ವಿಯಾಗಿದೆ. ಈ ಕುರಿತು ಸಂಶೋಧನಾ ಲೇಖನ ಅಂತಾರಾಷ್ಟ್ರೀಯ ಸಂಶೋಧನಾ ಜರ್ನಲ್ ‘ೈಟೋಟ್ಯಾಕ್ಸಾ’ (2024-25 ನೇ ಸಾಲಿಗೆ)ನಲ್ಲಿ ಪ್ರಕಟಗೊಂಡಿದೆ.
ಪ್ರಪಂಚದಲ್ಲಿ ಅಂದಾಜು 30 ಲಕ್ಷ ಸಸ್ಯಗಳನ್ನು ಸಮೀಕ್ಷೆ ಮಾಡಿದ್ದು, ಅದರಲ್ಲಿ ಇಲ್ಲಿಯ ವರೆಗೆ ಗುರುತಿಸಿರುವುದು 3.50 ಲಕ್ಷ ಪ್ರಬೇಧಗಳು ಮಾತ್ರ. ಅಂದರೆ 26.50 ಲಕ್ಷ ಸಸ್ಯಗಳನ್ನು ಗುರುತಿಸುವ ಕಾರ್ಯ ಆಗಬೇಕಾಗಿದೆ. ಈಗಾಗಲೇ ಈ ತಂಡವು ಕರ್ನಾಟಕದ ಬೀದರ, ಕಲಬುರಗಿ, ಗದಗ, ಹಾವೇರಿ, ರಾಯಚೂರು, ಬೆಳಗಾವಿ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಸಸ್ಯ ಸಮೀಕ್ಷೆಯನ್ನು ಕಳೆದ ಸಾಲಿಗೆ ಪೂರ್ತಿಗೊಳಿಸಿದ್ದು, ಪ್ರಸಕ ಸಾಲಿನಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರ್ಕ್ಯುಳಿ ಗ್ರಾಮದಲ್ಲಿ ಓಬಿರೋನಿಯಾ, ಮರ್ಕ್ಯುಳಿಯನ್ಸಿಸ್ ಶ್ರೇಯಸ್ ಮತ್ತು ಕೊಟ್ರೇಶ ಪ್ರಬೇಧ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಅಭಯಾರಣ್ಯದಲ್ಲಿ ಜುಕ್‌ಸೈನಿ ಸೀತಾರಾಮಿ ಶ್ರೇಯಸ್ ಮತ್ತು ಕೊಟ್ರೇಶ ಪ್ರಬೇಧ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋರೆ ಗುಡ್ಡದಲ್ಲಿ ್ಯಾರಾಸೋಪುಬಿಯಾ ಗೋರೆನ್ಸಿಸ್ ಪಟಗಾರ, ಬೆಟಗೇರಿ ಮತ್ತು ಕೋಟ್ರೇಶ ಪ್ರಬೇಧ ಮತ್ತು ಯುಟ್ರಿಕ್ಯುಲೇರಿಯಾ ಕುಮೆಟೆನ್ಸಿಸ್ ಕನೋಜ, ಪಟಗಾರ, ಬೆಟಗೇರಿ ಮತ್ತು ಕೋಟ್ರೇಶ ಪ್ರಬೇಧ ಸೇರಿ ಒಟ್ಟು 4 ಹೊಸ ಸಸ್ಯ ಪ್ರಬೇಧಗಳನ್ನು ಪ್ರೊ.ಕೊಟ್ರೇಶ ಕಾಟ್ರಹಳ್ಳಿ ಮಾರ್ಗದರ್ಶನದಲ್ಲಿ ಸಂಶೋಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ತಂಡದಲ್ಲಿ ಶ್ರೇಯಸ್ ಬೆಟಗೇರಿ, ವನಜಾ ಪಟಗಾರ, ಮಂಜುಶ್ರೀ ಕನೋಜ ಇದ್ದರು. ಇವರನ್ನು ಕರ್ನಾಟಕ ವಿವಿ ಕುಲಪತಿ ಅವರು ತಂಡವನ್ನು ಅಭಿನಂದಿಸಿದ್ದಾರೆ.