ಸಂಶೋಧನೆಗೆ ವೈಧಾನಿಕತೆ ಮುಖ್ಯ

16-SanduruP2
ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಡಾ.ಗುಡ್ಡಪ್ಪ, ಶಿವಕುಮಾರ ಇದ್ದರು.
Published on

ಸಂಡೂರು: ಸಂಶೋಧಕರಿಗೆ ಕಲ್ಪನೆ ಮತ್ತು ಭಾಷೆ ಜ್ಞಾನ ಅಗತ್ಯವಾಗಿದ್ದು, ಕಲ್ಪನೆ ಸಾಹಿತ್ಯಕ್ಕೆ ದೊಡ್ಡ ವರವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅಲುಮ್ನಿ ಅಸೋಸಿಯೇಷನ್ ಮತ್ತು ಕನ್ನಡ ಅಧ್ಯಯನ ವಿಭಾಗದ ಸಹಯೋಗದಲ್ಲಿ ಆಯೊಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ವಿದ್ಯಾರ್ಥಿಗಳು ಶೋಧ ಮಾಡುವಾಗ ಕನ್ನಡ ಸಾಹಿತ್ಯ ಮತ್ತು ಚರಿತ್ರೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕಾಗುತ್ತದೆ. ಸಂಶೋಧನೆಗೆ ವೈಧಾನಿಕತೆ ಮತ್ತು ವೈಜ್ಞಾನಿಕತೆ ಮುಖ್ಯವಾಗಿದೆ. ವೈಧಾನಿಕತೆ ಎಂದರೆ ದೃಷ್ಟಿಕೋನ. ಇದರಿಂದ ಸಂಶೋಧನಾ ಪ್ರಬಂಧಗಳ ರಚನೆ ಸಾಧ್ಯವಾಗುತ್ತದೆ ಎಂದರು.

ಕೇಂದ್ರದ ನಿರ್ದೇಶಕ ಡಾ.ಬಿ.ರವಿ ಮಾತನಾಡಿ, ಅಮರೇಶ ನುಗಡೋಣಿ ಅವರು ಈ ನಾಡು ಕಂಡಂತಹ ಹೆಸರಾಂತ ಕತೆಗಾರ, ಕಾದಂಬರಿಕಾರ ಮತ್ತು ಸಂಶೋಧಕರಾಗಿದ್ದಾರೆ. ಅನೇಕ ಕತೆ ಮತ್ತು ಕಾದಂಬರಿಗಳು ಸಿನಿಮಾ, ನಾಟಕಗಳಾಗಿದ್ದು, ಪ್ರತಿಷ್ಠಿತ ಪ್ರಶಸ್ತಿಗಳೂ ಲಭಿಸಿವೆ ಎಂದರು.

ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಮಲ್ಲಯ್ಯ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ವಿರೂಪಾಕ್ಷಿ, ಡಾ.ನರಸಿಂಹಮೂರ್ತಿ, ರಮೇಶ್, ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ, ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಈ.ಜಿ.ರೇಖಾ, ಡಾ.ಶಿವರಂಜನಿ, ದೇವೇಂದ್ರ, ಪ್ರಮುಖರಾದ ಡಾ.ಗುಡ್ಡಪ್ಪ, ಶಿವಕುಮಾರ, ರೇಣುಕಾ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net