

ಬೆಂಗಳೂರು: ದೇಶವು ತೋಟಗಾರಿಕೆ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ, ಕೊಯ್ಲೋತ್ತರ ವೇಳೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಈ ನೈಜ ಸ್ಥಿತಿಯನ್ನು ಅರಿತು ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಿಗಳು ಹೊಸ ತಾಂತ್ರಿಕತೆ ರೂಪಿಸುವತ್ತ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಿದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಹೇಳಿದ್ದಾರೆ.
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ (ಐಐಎಚ್ಆರ್) ಭಾನುವಾರ ಭೇಟಿ ನೀಡಿದ ವೇಳೆ ಪರಿಶಿಷ್ಟರ ಉಪಯೋಜನೆ ಅಡಿಯಲ್ಲಿ ನಿರ್ಮಿಸಿರುವ ರೈತರ ಸೌಕರ್ಯ ಕೌಂಟರ್ ಉದ್ಘಾಟಿಸಿ ಮಾತನಾಡಿದರು.
ಭಾರತ ಸ್ವಾತಂತ್ರಗೊಂಡ ವೇಳೆ ದೇಶದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ 25 ದಶಲಕ್ಷ ಮೆಟ್ರಿಕ್ ಟನ್ ಮಾತ್ರ ಇತ್ತು. ನಂತರದಲ್ಲಿ ತಂತ್ರಜ್ಞಾನ ಅಳವಡಿಕೆ ಹಾಗೂ ತಾಂತ್ರಿಕತೆ ಮೇಲ್ದರ್ಜೆಗೇರಿದ ಪರಿಣಾಮ ತೋಟಗಾರಿಕೆ ಬೆಳೆಗಾರರ ಶ್ರಮದಿಂದಾಗಿ 2022-23ರಲ್ಲಿ 350 ದಶಲಕ್ಷ ಮೆಟ್ರಿಕ್ ಟನ್ಗೆ ಏರಿ ಸ್ವಾವಲಂಬನೆ ಸಾಧಿಸಲಾಗಿದೆ. ಆದರೂ, ಕೊಯ್ಲೋತ್ತರ ವೇಳೆ ಸಾಕಷ್ಟು ಉತ್ಪನ್ನ ಸಂರಕ್ಷಣೆ ಮಾಡಲಾಗದೆ ನಷ್ಟು ಉಂಟಾಗುತ್ತಿದೆ. ಬೇಗನೆ ಕೊಳೆಯುವ ಪಟ್ಟಿಗೆ ಸೇರಿರುವ ಹಣ್ಣು ತರಕಾರಿಯನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳುವಂತಹ ತಾಂತ್ರಿಕತೆ ರೂಪಿಸಿದ್ದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದ ಎಂದು ಪ್ರತಿಪಾದಿಸಿದರು.
ನಿಧಿ ಸದ್ಬಳಕೆ ಮಾಡಿಕೊಳ್ಳಿ:
ಕೃಷಿ ಒಳಗೊಂಡಂತೆ ತೋಟಗಾರಿಕೆ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಜಾರಿ ಮಾಡಲು 2020ರಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಮೊತ್ತದ ಕೃಷಿ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಿದೆ. ಇದರಡಿ ಬೇಗನೆ ಕೊಳೆತುಹೋಗುವ ಹಣ್ಣು-ತರಕಾರಿಗಳ ಸಂಕ್ಷಣೆಗೆ ಶೈತ್ಯಾಗಾರ, ರೈತ ಉತ್ಪಾಕ ಕಂಪನಿ (ಎ್ಪಿಒ), ಪ್ರಾಥಮಿಕ ಕೃಷಿ ಸಹಕಾರ ಸೊಸೈಟಿ ಸ್ಥಾಪನೆ, ಸ್ಟಾರ್ಟಪ್ ಇತ್ಯಾದಿ ಉಪಕ್ರಮಗಳಿಗೆ ಅಗತ್ಯ ಹಣಕಾಸು ಒದಗಿಸಲಾಗುತ್ತಿದೆ. ಈ ನಿಧಿಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ತೋಟಗಾರಿಕೆ ಕ್ಷೇತ್ರವು ಇನ್ನಷ್ಟು ಸಶಕ್ತವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಸಚಿವರು ವಿವರಿಸಿದರು.
ಇದೇ ವೇಳೆ ಸಚಿವರು ಜಾರ್ಖಂಡ್. ಚತ್ತೀಸ್ಗಡ ಸಹಿತ ಇತರ ಬುಡಕಟ್ಟು ಸಮುದಾಯ ಹೆಚ್ಚಿರುವ ರಾಜ್ಯಗಳಲ್ಲಿ ಹೆಚ್ಚು ಲಾಭದಾಯಕವುಳ್ಳ ತೋಟಗಾರಿಕೆ ಬೆಳೆಗಳನ್ನು ರೈತರಿಗೆ ಪರಿಚಯಿಸಲು ಐಐಎಚ್ಆರ್ ತಳಿಗಳು, ತಾಂತ್ರಿಕತೆ ಒದಗಿಸಲು ಒಡಂಬಡಿಕೆಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಐಐಎಚ್ಆರ್ ನಿರ್ದೇಶಕ ಪ್ರೊ. ಸಂಜಯ್ ಕುಮಾರ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.