ಪರಿಹಾರಕ್ಕೆ ಸಂಶೋಧನೆ ಮುಖ್ಯ

IMG20240826200933.jpg
Published on

ಬೆಳಗಾವಿ: ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಮುನ್ನಡೆಸುವಲ್ಲಿ ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಟಿಯು ಕುಲಸಚಿವ ಪ್ರೊ.ಬಿ.ಈ. ರಂಗಸ್ವಾಮಿ ಅಭಿಪ್ರಾಯಪಟ್ಟರು.

ನಗರದ ವಿಟಿಯು ಎಂಬಿಎ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಂಶೋಧನೆ ಪರ್ಯಾಯ ಸ್ವಾವಲಂಬಿ ಆರ್ಥಿಕತೆ ನಿರ್ಮಿಸುತ್ತದೆ. ಅದು ದೇಶದ ಏಳಿಗೆ ಮತ್ತು ಸುಸ್ಥಿರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಸ್ವಾವಲಂಬಿ ಪರಿಹಾರ ಕಂಡುಕೊಳ್ಳಲು ಕಾರಣವಾಗುತ್ತದೆ. ಇದು ದೇಶದಲ್ಲಿ ಸ್ಥಳೀಯ ತಂತ್ರಜ್ಞಾನಗಳ ಅಭಿವೃದ್ಧಿ ಬೆಂಬಲಿಸುತ್ತದೆ. ನಮ್ಮರಾಷ್ಟ್ರವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಲು ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ವಿಟಿಯು ಕುಲಸಚಿವ (ಮೌಲ್ಯಮಾಪನ) ಪ್ರೊ.ಟಿ.ಎನ್.ಶ್ರೀನಿವಾಸ, ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯ್ಕ ಜಿ., ಎಂಬಿಎ ಅಧ್ಯಕ್ಷ ಡಾ.ಪ್ರಹ್ಲಾದ ರಾಠೋಡ್, ಕಾರ್ಯಾಗಾರದ ಸಂಚಾಲಕ ಪ್ರೊ.ಬಿ.ಎಸ್.ಕುಡಚಿಮಠ, ಪ್ರೊ.ವಿಜಯ ದನ್ನೂರ, ಪ್ರೊ.ದೀಪ್ತಿ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net