ಸಂಶೋಧನಾ ಕೇಂದ್ರಕ್ಕೆ ದೇಹದಾನ

DEEEEE
Published on

ಹುಕ್ಕೇರಿ: ಭಾನುವಾರ ನಿಧನರಾದ ತಾಲೂಕಿನ ಗೌಡವಾಡ ನಿವಾಸಿ ಶಂಕರಗೌಡ ಭೀ. ದೇಸಾಯಿ (73) ನಿಧನದ ನಂತರ ಅವರ ಅಪೇಕ್ಷೆಯಂತೆ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆ.

ಅವರ ಮೃತ ದೇಹವನ್ನು ಅವರ ಮಕ್ಕಳು ಬೆಳಗಾವಿಯ ಡಾ. ಪ್ರಭಾಕರ ಕೋರೆ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಮೃತರಿಗೆ ಮೂವರು ಪುತ್ರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net