ಕೃಷಿ ಹೊಂಡದಲ್ಲಿ ಬಾಲಕನ ರಕ್ಷಣೆಯ ಪ್ರಯತ್ನ, ಇಬ್ಬರು ಸಾವು

16clr2
Published on

ಚಿಕ್ಕಬಳ್ಳಾಪುರ: ಚೇಳೂರು ತಾಲೂಕಿನ ಗುಂಡ್ಲಪಲ್ಲಿಯಲ್ಲಿನ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಚೇಳೂರು ತಾಲೂಕಿನ ಬೀರಂಗಿವಾಂಡ್ಲಪಲ್ಲಿಯ ಭಾಸ್ಕರ್ (40) ಮತ್ತು ಬೆಂಗಳೂರಿನಲ್ಲಿ ಮಹೇಂದ್ರ (14) ಮೃತರು. ಮೊದಲು ಕೃಷಿ ಹೊಂಡದಲ್ಲಿ ಈಜಲು ಬಾಲಕ ಹೋಗಿದ್ದಾನೆ. ಇದೇ ವೇಳೆ ನೀರಿನಲ್ಲಿ ಮುಳುಗುತ್ತಿದ್ದನ್ನು ಕಂಡ ಭಾಸ್ಕರ್ ರಕ್ಷಿಸಲು ಯತ್ನಿಸಿದ್ದಾರೆ. ಕೊನೆಗೆ ಇಬ್ಬರು ನೀರಿನಿಂದ ಮೇಲಕ್ಕೆ ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಹೇಂದ್ರ ಅಜ್ಜನ ಗುಂಡ್ಲಪಲ್ಲಿ ಊರಿಗೆ ಬಂದಿದ್ದ. ಗುರುವಾರ ಮಧ್ಯಾಹ್ನ ಗ್ರಾಮದ ಸರಕಾರಿ ಶಾಲೆಯ ಹಿಂಭಾಗದಲ್ಲಿರುವ ನರಸಿಂಹರೆಡ್ಡಿ ಎಂಬುವರಿಗೆ ಸೇರಿದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಇದೇ ಇಬ್ಬರನ್ನು ಬಲಿಪಡೆದಿದೆ.

 *ಭಯದಲ್ಲಿ ಮಕ್ಕಳು ಪರಾರಿ                                                                                                                       ಇಬ್ಬರು ನೀರಿನಿಂದ ಮೇಲಕ್ಕೆ ಬರಲು ಆಗದೇ ಮುಳುಗುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಇತರ ಮಕ್ಕಳು ಭಯಪಟ್ಟು ಪರಾರಿಯಾಗಿದ್ದಾರೆ. ಇದರ ನಡುವೆ ಕೃಷಿ ಹೊಂಡದ ಕಡೆ ಬಂದ ಗ್ರಾಮದ ಮಹಿಳೆಯೊಬ್ಬರು, ಸ್ಥಳದಲ್ಲಿ ಎರಡು ಜೊತೆ ಬಟ್ಟೆ ಮತ್ತು ಚಪ್ಪಲಿಗಳು ಇದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ನೀರಿನಿಂದ ಮೃತದೇಹಗಳನ್ನು ಹೊರಗಡೆ ತೆಗೆದಿದ್ದು ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net