

ಹೆಬ್ರಿ: ಪೆರ್ಡೂರು ಗ್ರಾಮದ ಬೈರಂಪಳ್ಳಿ ಎಂಬಲ್ಲಿ ಶೀನ ನಾಯ್ಕ ಎಂಬುವರ ಮನೆ ಬಾವಿಗೆ ಬಿದ್ದ ಚಿರತೆ ರಕ್ಷಿಸಲಾಗಿದೆ. ನಾಯಿ ಹಿಡಿಯಲು ಹೋಗಿ ಚಿರತೆ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದ್ದು, ಬಾವಿಗೆ ಬೋನು ಅಳವಡಿಸಿ ಚಿರತೆಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆ ವೇಳೆ ಆರ್‌ಎಫ್‌ಒ ಸಿದ್ದೇಶ್ವರ, ಡಿಆರ್‌ಎಫ್‌ಒಗಳಾದ ನವೀನ್, ಶೇಖರ್, ಗಣೇಶ್ ಹಾಗೂ ಸಿಬ್ಬಂದಿ ಇದ್ದರು.