ಸಮುದ್ರಪಾಲಾಗುತ್ತಿದ್ದ ಮೂವರ ರಕ್ಷಣೆ

Life guards rescued 3 peoples in Murdeshwar.
Published on

ಭಟ್ಕಳ: ಪ್ರವಾಸಕ್ಕೆಂದು ಬಂದು ಮೋಜು ಮಸ್ತಿ ಮಾಡಲು ಸಮುದ್ರಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ ಮೂವರು ಪ್ರವಾಸಿಗರನ್ನು ಮುರ್ಡೆಶ್ವರ ಕಡಲ ತೀರದ ಲೈಫ್​ಗಾರ್ಡ್​ಗಳು ರಕ್ಷಿಸಿ, ದಡಕ್ಕೆ ತಂದಿದ್ದಾರೆ.

ಹಾವೇರಿ ಜಿಲ್ಲೆಯ ಹಂಸಬಾವಿ ಗ್ರಾಮದ ಸಿದ್ದಾರ್ಥ(24), ದಿಕ್ಷಿತ್(20), ಸಂತೋಷ(24) ರಕ್ಷಿಸಲ್ಪಟ್ಟವರು.

ಇವರು ಒಟ್ಟು 5 ಜನರು ಸೇರಿ ಧರ್ಮಸ್ಥಳದಿಂದ ಮುರ್ಡೆಶ್ವರಕ್ಕೆ ಪ್ರವಸಕ್ಕೆಂದು ಬಂದಿದ್ದರು.

ಸಮುದ್ರದಲ್ಲಿ ನೀರಿನಾಟಕ್ಕೆ ತೊಡಗಿ ಅಲೆಯ ರಭಸಕ್ಕೆ ಸಿಕ್ಕಿ ಸಮುದ್ರಪಾಲಾಗುವ ಹಂತದಲ್ಲಿದ್ದರು. ಸ್ಥಳದಲ್ಲಿದ್ದ ಲೈಫ್​ಗಾರ್ಡ್​ಗಳಾದ ಚಂದ್ರಶೇಖರ ದೇವಾಡಿಗ, ಜಯರಾಮ, ಪಾಂಡು, ಹನುಮಂತ ತಕ್ಷಣ ನೀರಿಗೆ ಧುಮುಕಿ ಸಮುದ್ರ ಪಾಲಾಗುತ್ತಿರುವವರನ್ನು ರಕ್ಷಿಸಿದ್ದಾರೆ. ಬೀಚ್ ಸುಪರ್​ವೈಸರ್ ದತ್ತಾತ್ರೆಯ ಶೆಟ್ಟಿ ಈ ಕುರಿತು ಮುರ್ಡೆಶ್ವರ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net