ಚರಂಡಿಗೆ ಬಿದ್ದ ಎಮ್ಮೆ ರಕ್ಷಣೆ

21-ANP-P2
Published on

ಆನಂದಪುರ: ತಳಗೇರಿ ಗ್ರಾಮದಲ್ಲಿ ಚರಂಡಿಗೆ ಬಿದ್ದು ಪ್ರಾಣಾಪಾಯದಲ್ಲಿ ಸಿಲುಕಿದ್ದ ಎಮ್ಮೆಯನ್ನು ಭಾನುವಾರ ಗ್ರಾಮಸ್ಥರು ರಕ್ಷಿಸಿದರು. ಗ್ರಾಮದ ಮುಖ್ಯ ಚರಂಡಿ ಅಗಲ ಮತ್ತು ಆಳವಾಗಿದ್ದು ಅಪಾಯಕಾರಿಯಾಗಿದೆ. ಮೇವಿಗೆ ಬಿಟ್ಟ ಎಮ್ಮೆ ಈ ಚರಂಡಿಯಲ್ಲಿ ತಲೆ ಕೆಳಗಾಗಿ ಬಿದ್ದು ವಿಲವಿಲ ಒದ್ದಾಡುತ್ತಿತ್ತು. ತಕ್ಷಣ ಗ್ರಾಮಸ್ಥರು ಧಾವಿಸಿ ಬಂದು ಮುದುಡಿದ್ದ ತಲೆಯನ್ನು ಎತ್ತಿ ನೀರು ಕುಡಿಸಿದರು. ಹಗ್ಗದಿಂದ ಎಮ್ಮೆಯನ್ನು ಮೇಲಕ್ಕೆತ್ತಿ ಗಾಯಗಳಿಗೆ ಔಷಧ ಲೇಪಿಸಿದರು. ಗ್ರಾಮಸ್ಥರಾದ ಹುಚ್ಚಪ್ಪ, ಮಂಜುನಾಥ, ಮಿಲನ, ಪ್ರಶಾಂತ , ಲೋಹಿತ ಇತರರು ರಕ್ಷಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net