ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 15ಕ್ಕೂ ಹೆಚ್ಚು ಗೋವುಗಳ ರಕ್ಷಣೆ

04_HSN_07
Published on

ಹಾಸನ: ಅಕ್ರಮವಾಗಿ ದನ-ಕರುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಎರಡು ವಾಹನಗಳನ್ನು ತಡೆದ ವಿಶ್ವ ಹಿಂದು ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರು ಆರೋಪಿಗಳನ್ನು ಮಂಗಳವಾರ ಬಡಾವಣೆ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದರು.

ವಿಶ್ವ ಹಿಂದು ಪರಿಷತ್ತು ನಗರ ಕಾರ್ಯದರ್ಶಿ ಶಶಿಧರ್ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ನಗರ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲ ಕಡೆ ಹಸುಗಳು ಕಳ್ಳತನವಾಗುತ್ತಿವೆ. ಇನ್ನು ಹಸುಗಳ ಮಾರಾಟ ನೆಪದಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಬಗ್ಗೆ ತಿಳಿದು ಬಂದ ಹಿನ್ನಲೆಯಲ್ಲಿ ವಿಶ್ವ ಹಿಂದು ಪರಿಷತ್ತು ಮತ್ತು ಭಜರಂಗ ದಳದಿಂದ ಎರಡು ಮೂರು ಕಡೆ ಪರಿಶೀಲನೆ ಮಾಡಲಾಯಿತು. ಕಾನೂನು ಪ್ರಕಾರ ಹೋಗಬೇಕೆಂದು ಪೊಲೀಸ್ ಠಾಣೆಗೆ ಮೊದಲೇ ಮಾಹಿತಿ ನೀಡಿ ಅವರ ಸಮ್ಮುಖದಲ್ಲಿ ಎರಡು ವಾಹನವನ್ನು ರಸ್ತೆಯಲ್ಲಿ ತಡೆಯಲಾಯಿತು. ಒಂದು ವಾಹನದಲ್ಲಿ 10 ರಿಂದ 12 ಎಳೆ ಕರುಗಳು ಇದ್ದು, ಇನ್ನೊಂದು ವಾಹನದಲ್ಲಿ 5 ರಿಂದ 6 ಧನಗಳು (ಗೂಳಿ) ಕಸಾಯಿ ಖಾನೆಗೆ ಹೋಗುತ್ತಿದ್ದವು. ತಡೆದು ವಿಚಾರಿಸಿದಾಗ ಹಿರೀಸಾವೆ ಎಂದು ಹೇಳಿದರು. ಆದರೆ ಇವೆಲ್ಲಾ ಬೆಂಗಳೂರಿಗೆ ಗೋ ಮಾಂಸ ದಂಧೆಗೆ ಸಾಗಿಸಲಾಗುತ್ತಿತ್ತು ಎಂದು ದೂರಿದರು.

ಈ ವೇಳೆ ವಿಶ್ವ ಹಿಂದು ಪರಿಷತ್ತು ಸಹ ಕಾರ್ಯದರ್ಶಿ ಮಂಜು, ಭಜರಂಗದಳದ ಸಹ ಸಂಯೋಜಕರು ಯಶಸ್ಸು, ವಿದ್ಯಾರ್ಥಿ ಪ್ರಮುಖ್ ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net