ಮೈಸೂರಿನಲ್ಲಿ ಚಿರತೆ ಹಾಗೂ ಮೂರು ಮರಿಗಳ ರಕ್ಷಣೆ

Rescue of leopard and three cubs in Mysore
Published on

ಮೈಸೂರು: ತಾಲೂಕಿನ ಮಾರಶೆಟ್ಟಳ್ಳಿ ಗ್ರಾಮದಲ್ಲಿ ಬುಧವಾರ ಮೂರು ಚಿರತೆ ಮರಿ ಹಾಗೂ ತಾಯಿ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

ಮಾರಶೆಟ್ಟಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮಂಗಳವಾರ ಕಬ್ಬು ಕಟಾವು ಮಾಡುವ ಸಂದರ್ಭ ಮೂರು ಚಿರತೆ ಮರಿಗಳು ಕಂಡು ಬಂದವು. ತಕ್ಷಣ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಬ್ಬಿನ ಗದ್ದೆಯಲ್ಲಿ ಬೋನು ಇರಿಸಿ ಬೋನಿನಲ್ಲಿ ಚಿರತೆ ಮರಿಗಳನ್ನು ಇರಿಸಲಾಗಿತ್ತು. ಬುಧವಾರ ಚಿರತೆಯು ಬೋನಿನಲ್ಲಿ ಸೆರೆಯಾಯಿತು. ಚಿರತೆ ಹಾಗೂ ಚಿರತೆ ಮರಿಗಳನ್ನು ಒಟ್ಟಿಗೆ ಕಾಡಿಗೆ ಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net