

ಸುಳ್ಯ: ನಾಯಿಗಳ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ಜಿಂಕೆಯನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಸೋಣಂಗೇರಿ-ದುಗ್ಗಲಡ್ಕ ರಸ್ತೆಯ ಗೋಂಟಡ್ಕ ಎಂಬಲ್ಲಿ ನಾಯಿಗಳ ದಾಳಿಗೆ ಸಿಲುಕಿದ ಜಿಂಕೆ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿತ್ತು. ತುಂಬು ಗರ್ಭಿಣಿಯಂತೆ ಕಂಡುಬರುತ್ತಿದ್ದ ಜಿಂಕೆಯನ್ನು ಉಪಚರಿಸಿ, ಬಳಿಕ ಸುಳ್ಯಕ್ಕೆ ವಾಹನದಲ್ಲಿ ಸಾಗಿಸಿ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡ ಜಿಂಕೆ.ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡ ಜಿಂಕೆ.