

ಪಡುಬಿದ್ರಿ: ಕಾಪು ಬೀಚ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಇಡಲು ಸಮುದ್ರಕ್ಕೆ ಹೋಗಿ, ಸಮುದ್ರಪಾಲಾಗುತ್ತಿದ್ದ ಕಾಪು ಪಡುಗ್ರಾಮದ ಸಚಿನ್(31) ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಭಾನುವಾರ ಸಾಂಪ್ರದಾಯಿಕ ಮೀನುಗಾರಿಕೆಗಾಗಿ ಬಲೆ ಇಡಲು ತೆರಳಿದ್ದ ಸಚಿನ್ ಸಮುದ್ರದಲ್ಲಿ ಮುಳುಗಿ, ಸಮುದ್ರಪಾಲಾಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಬೊಬ್ಬೆ ಹಾಕಿದ್ದು, ಮೀನುಗಾರಿಕಾ ವೃತ್ತಿನಿರತರಾದ ಶರ್ಮಾ, ಹರೀಶ್ ಕರ್ಕೇರ ಸಮುದ್ರಕ್ಕೆ ಇಳಿದು ಯುವಕನ ಜೀವ ರಕ್ಷಿಸಿದ್ದಾರೆ. ಯುವಕನನ್ನು ರಕ್ಷಿಸಿ ಮೇಲಕ್ಕೆ ತರುವಾಗ ರಕ್ಷಣಾ ದೋಣಿ ಕೂಡ ಮಗುಚಿ ಬಿದ್ದಿದ್ದು, ಈ ವೇಳೆ ಕಾಪು ಬೀಚ್‌ನಲ್ಲಿರುವ ಲೈಫ್ ಗಾರ್ಡ್‌ಗಳು ಅವರ ರಕ್ಷಣೆಗೆ ಧಾವಿಸಿ ಸಹಕಾರ ನೀಡಿದ್ದಾರೆ.