ಮರದ ಮೇಲೆ ಅಸ್ವಸ್ಥಗೊಂಡಿದ್ದ ಕಾರ್ಮಿಕನ ರಕ್ಷಣೆ

1712485648795
ತೆಂಗಿನ ಮರದ ಮೇಲೆ ಅಸ್ವಸ್ಥಗೊಂಡಿದ್ದ ಕಾರ್ಮಿಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
Published on

ಸಕಲೇಶಪುರ: ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ತೆಂಗಿನಮರದ ಗರಿಗಳನ್ನು ಕಡಿಯುತ್ತಿದ್ದ ಕಾರ್ಮಿಕನೊಬ್ಬ ಬಿಸಿಲ ತಾಪಕ್ಕೆ ಸಿಲುಕಿ ಮರದಲ್ಲೆ ಅಸ್ವಸ್ಥಗೊಂಡಿದ್ದ.

ಹಲುಸುಲಿಗೆ ಗ್ರಾಮದ ನವೀನ್ (30) ಅಸ್ವಸ್ಥಗೊಂಡ ಕಾರ್ಮಿಕ. ಕೊಲ್ಲಹಳ್ಳಿ ಗ್ರಾಮದ ಮಂಜುನಾಥ ಎಂಬುವರ ತೋಟದ ಕೆಲಸಕ್ಕಾಗಿ ಆಗಮಿಸಿದ್ದ ಈತ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅತಿಯಾದ ಬಿಸಿಲಿಗೆ ನಿತ್ರಾಣಗೊಂಡು ತೆಂಗಿನ ಮರದ ಮೇಲೆ ಮಲಗಿದ್ದ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಮೂಲಕ ಆತನನ್ನು ರಕ್ಷಿಸಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net