ಪುನಗು ಬೆಕ್ಕು ರಕ್ಷಣೆ

10 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜನರನ್ನು ನೋಡಿ ಓಡಿ ಹೋಗುವಾಗ ಗಿಡದ ಪೊದೆಯಲ್ಲಿ ಸಿಲುಕಿದ್ದ ಪುನಗು ಬೆಕ್ಕು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಘಟನೆ ನಗರದ ಸಪ್ತಾಪುರದಲ್ಲಿ ಭಾನುವಾರ ನಡೆದಿದೆ.

ಸಪ್ತಾಪುರ ದೀಪಕ ಗಾಯತೊಂಡೆ ಎಂಬುವವರ ಮನೆ ಆವರಣಕ್ಕೆ ಪುನಗು ಬೆಕ್ಕು ಆಗಮಿಸಿದೆ. ಆಗ ಅಲ್ಲಿ ಸೇರಿದ್ದ ಜನರನ್ನು ಕಂಡು ಗಾಬರಿಯಿಂದ ಓಡುವ ಸಮಯದಲ್ಲಿ ಗಿಡದ ಬಡ್ಡೆಯೊಂದರಲ್ಲಿ ಸಿಲುಕಿಕೊಂಡು ಒದ್ದಾಡಿದೆ. ಕೂಡಲೇ ಸ್ಥಳಿಕರು ವೈಲ್ಡ್​ ಲೈಫ್ ವೆಲ್ಫೇರ್​ ಸೊಸೈಟಿ ಅಧ್ಯಕ್ಷ ಯಲ್ಲಪ್ಪ ಜೋಡಳ್ಳಿ ಅವರಿಗೆ ಮಾಹಿತಿ ನೀಡಿದ್ದಾರೆ.

ಕೆಲ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಯಲ್ಲಪ್ಪ ಅವರು ಬೆಕ್ಕು ರಕ್ಷಣೆ ಮಾಡಿದ್ದಾರೆ. ಬೆಕ್ಕಿಗೆ ಗಾಯವಾಗಿದ್ದು ಚಿಕಿತ್ಸೆ ಬಳಿಕ ಕಾಡಿಗೆ ಬಿಡಲಾಗುವುದು ಎಂದು ಯಲ್ಲಪ್ಪ ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಎಲ್​.ಆರ್​. ನಾಯ್ಕ ಹಮಾನಿ, ಸೊಸೈಟಿ ಸದಸ್ಯರಾದ ಮಂಜುನಾಥ, ಶೇಖರ, ವಿನಾಯಕ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net