ಬಲೆಗೆ ಬಿದ್ದಿದ್ದ ಜಿಂಕೆ ರಕ್ಷಣೆ

3mnd1..
Published on

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಅರಣ್ಯದಂಚಿನ ಗದ್ದೆಯ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟ ಘಟನೆ ಗುರುವಾರ ಜರುಗಿದೆ.

ಬಸವರಾಜ ಶೆರೇವಾಡ ಎಂಬುವವರು ಬೆಳೆ ರಕ್ಷಣೆಗಾಗಿ ತಮ್ಮ ಗದ್ದೆಯ ಸುತ್ತಲೂ ಬಲೆ ಹಾಕಿದ್ದರು. ಬುಧವಾರ ರಾತ್ರಿ ಆಹಾರ ಅರಸುತ್ತ ಬಂದ ಜಿಂಕೆಯೊಂದು ಬಲೆಯಲ್ಲಿ ಸಿಲುಕಿಕೊಂಡಿದೆ. ಬೆಳಗ್ಗೆ ಗದ್ದೆಗೆ ಹೋದಾಗ ಜಿಂಕೆ ಬಲೆಯಲ್ಲಿ ಸಿಲುಕಿಕೊಂಡಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ಬಲೆಯಲ್ಲಿ ಬಿಡಿಸಿ ಅರಣ್ಯಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net