ಮುಳುಗುತ್ತಿದ್ದ ದೋಣಿಯಲ್ಲಿದ್ದ 7 ಮೀನುಗಾರರ ರಕ್ಷಣೆ

bOAT
Published on

ಪಡುಬಿದ್ರಿ: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ದೋಣಿ ಚಂಡಮಾರುತ ಪ್ರಭಾವದಿಂದ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿ 7 ಮಂದಿ ಮೀನುಗಾರರನ್ನು ರಕ್ಷಿಸಿದ ಘಟನೆ ಉಚ್ಚಿಲದಲ್ಲಿ ಸೋಮವಾರ ನಡೆದಿದೆ.

ಉಚ್ಚಿಲ ವಿಮಲಾ ಸಿ.ಪುತ್ರನ್ ಮಾಲೀಕತ್ವದ ಶ್ರೀ ಗಿರಿಜಾ ದೋಣಿಯಲ್ಲಿ ಸೋಮವಾರ ಮುಂಜಾನೆ 5 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದರು. ಚಂಡಮಾರುತದಿಂದಾಗಿ ಸಮುದ್ರ ಕ್ಷುದ್ರಗೊಂಡು ಅಬ್ಬರದ ಅಲೆಗೆ ಸಿಲುಕಿ ದೋಣಿ ಮುಳುಗಿದೆ. ಈ ವೇಳೆ ದೋಣಿಯಲ್ಲಿದ್ದವರನ್ನು ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಇತರ ದೋಣಿಯವರು ರಕ್ಷಣೆ ಮಾಡಿದ್ದಾರೆ. ದೋಣಿಯಲ್ಲಿದ್ದ ಬಲೆ ಹಾಗೂ ಹೈಸ್ಪೀಡ್ ಇಂಜಿನ್ ಸಮುದ್ರಪಾಲಾಗಿದ್ದು, ಲಕ್ಷಾಂತರ ರೂ. ಸೊತ್ತು ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಲಾಲಾಜಿ ಆರ್.ಮೆಂಡನ್ ಭೇಟಿ ನೀಡಿ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net