ಮನೆಯಲ್ಲಿ ಅಡಗಿದ್ದ ಹಾವು ರಕ್ಷಣೆ

1734269648733
Published on

ಕಂಪಲಾಪುರ: ಕಂಪಲಾಪುರ ಕೊಪ್ಪಲಿನ ಮಂಟಿ ಚಂದ್ರು ಅವರ ಮನೆಯಲ್ಲಿ ಅಡಗಿದ್ದ ನಾಗರಹಾವನ್ನು ಉರಗ ಸಂರಕ್ಷಕ ಸ್ನೇಕ್  ಗಿರೀಶ್

ರಕ್ಷಿಸಿ ಕಾಡಿಗೆ ಬಿಟ್ಡಿದ್ದಾರೆ. ಚಂದ್ರು ಅವರ ಪುತ್ರಿ ಐಶ್ವರ್ಯ ಮನೆಯಲ್ಲಿ ಓದಿನಲ್ಲಿ ತಲ್ಲೀನರಾಗಿದ್ದರು. ರೂಮಿನ ಪಕ್ಕದಲ್ಲಿ ಹಾವನ್ನು ಇರುವುದು ಕಾಣಿಸಿದೆ. ತಕ್ಷಣ ಭಯದಿಂದ ಬಾಗಿಲು ಹಾಕಿಕೊಂಡು ತಮ್ಮ ತಂದೆಯನ್ನು ಕೂಗಿದ್ದಾರೆ. ಬಳಿಕ ಗ್ರಾಮದ ಸ್ನೇಕ್ ಗಿರೀಶ್ ಅವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದು ಗಿರೀಶ್, ಹಾವನ್ನು ಹಿಡಿದು ಸಮೀಪದ ಕಂಬಿಬೋರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net