ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ 7 ಮಂದಿ ಮೀನುಗಾರರ ರಕ್ಷಣೆ

malpe
Published on

ಮಲ್ಪೆ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸೋಮವಾರ ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಬಂಡೆಗೆ ಬಡಿದು ಮುಳುಗಡೆಗೊಂಡಿದೆ. ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಮೇ 21ರಂದು ರಾತ್ರಿ 7 ಮಂದಿ ಮೀನುಗಾರರೊಂದಿಗೆ ಉದ್ಯಾವರ ಸಂಪಿಗೆನಗರದ ರಾಹಿಲ್ ಅವರಿಗೆ ಸೇರಿದ ಸೀ ಬರ್ಡ್ ಬೋಟು ಮಲ್ಪೆ ಬಂದರಿನಿಂದ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಮಳೆ ಗಾಳಿಗೆ ಬೋಟ್ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಬಡಿದಿದೆ. ಈ ವೇಳೆ ನೀರು ಬೋಟಿನ ಹೊಳಹೊಕ್ಕಿ ಬೋಟು ಮುಳುಗಲಾರಂಭಿಸಿತ್ತು. ಸಮೀಪದಲ್ಲಿದ್ದ ಬೋಟಿನವರು ಧಾವಿಸಿ ಬಂದು ಮುಳುಗುತ್ತಿರುವ ಬೋಟಿನಲ್ಲಿದ್ದ ಏಳೂ ಮಂದಿಯನ್ನು ರಕ್ಷಣೆ ಮಾಡಿ ಮಲ್ಪೆ ಬಂದರಿಗೆ ಕರೆ ತಂದಿದ್ದಾರೆ. ಬೋಟು ಸಂಪೂರ್ಣ ಮುಳುಗಡೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net