ಬಾವಿಗೆ ಬಿದ್ದ ಸೀಮೆ ಹಸು ರಕ್ಷಣೆ,  ಗ್ರಾಮದ ಯುವಕರ ಸಾಹಸ*

IMG-20240912-WA0138-1.jpg
Published on

ಚಿಕ್ಕಬಳ್ಳಾಪುರ:ಗೌರಿಬಿದನೂರು ತಾಲೂಕಿನ ಚಂದನದೂರು ಗ್ರಾಮದಲ್ಲಿ ಕಾಲು ಜಾರಿ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಯುವಕರ ಸಾಹಸ ಮೆಚ್ಚುಗೆಗೆ ಪಾತ್ರವಾಗಿದೆ. 

ಗ್ರಾಮದ ಉದಯಪ್ಪ ಎಂಬುವರಿಗೆ ಸೇರಿದ ಸೀಮೆ ಹಸು ಬೆಳಿಗ್ಗೆ 11.30 ರ ಸಮಯದಲ್ಲಿ ಮೇಯುವಾಗ ಆಕಸ್ಮಿಕವಾಗಿ ಹಳೇ ಬಾವಿಗೆ ಜಾರಿ ಬಿದ್ದಿದೆ. ಹಸು ಬಾವಿಗೆ ಬಿದ್ದು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ  ಉದಯಪ್ಪ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದಾದ್ದಾರೆ. ಬಾವಿಗೆ ಇಳಿದು ಕಾರ್ಯಾಚರಣೆ ಮಾಡುವ ಬಗ್ಗೆ ನಮಗೆ ತರಬೇತಿ ನೀಡಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗೆ ಇಳಿಯಲು ಮೀನ ಮೇಷ ಎಣಿಸಿದ್ದಾರೆ. ಸುಮಾರು 2 ಗಂಟೆ ಸುಮಾರಿಗೆ ಹಂಪಸಂದ್ರ ಗ್ರಾಮದ ಯುವಕರಾದ ರಾಮಕೃಷ್ಣ, ಸತೀಶ್, ರವಿಕುಮಾರ್ ಹಾಗೂ ಮಧು ನಾಲ್ಕು ಜನರ ಯುವಪಡೆ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಹಸುವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದೆ. ಸಾಹಸ ಮೆರೆದು ಹಸುವಿನ ಪ್ರಾಣ ರಕ್ಷಣೆ ಮಾಡಿದ ಯುವಕರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net