ರೈಲು ಸಂಚಾರದ ಮಾರ್ಗ ಬದಲಾವಣೆ

New TRain
Published on

ಹುಬ್ಬಳ್ಳಿ : ರಾಹುರಿ-ಪಢೆಗಾಂವ ಮತ್ತು ದೌಂಡ-ಮ್ಯಾನಮಾಡ್ ಮಧ್ಯೆ ಕೈಗೊಂಡ ಅಭಿವೃದ್ಧಿ ಕಾಮಗಾರಿಯಿಂದಾಗಿ ವಿವಿಧ ರೈಲುಗಳ ಸಂಚಾರದ ಮಾರ್ಗ ಬದಲಾಯಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.

ಬದಲಾದ ಮಾರ್ಗದೊಂದಿಗೆ ಸೆ. 22ರಂದು ವಾಸ್ಕೊ- ಹಜರತ್ ನಿಜಾಮುದ್ದಿನ್ ಡೈಲಿ ಎಕ್ಸ್​ಪ್ರೆಸ್ ರೈಲು ಪುಣೆ, ಲೊನಾವಾಲಾ, ಕರ್ಜಾತ್, ಪಾನ್ವೆಲ್, ಕಲ್ಯಾಣ, ಇಗತ್ಪುರಿ ಮತ್ತು ಮ್ಯಾನಮಾಡ್ ನಿಲ್ದಾಣಗಳ ಮೂಲಕ, ಯಶವಂತಪುರ- ಅಹ್ಮದಾಬಾದ್ ವೀಕ್ಲಿ ಎಕ್ಸ್​ಪ್ರೆಸ್ ರೈಲು ದೌಂಡ, ಪುಣೆ, ಲೊನಾವಾಲಾ, ಕರ್ಜಾತ, ಕಲ್ಯಾಣ, ಪಾನ್ವೆಲ್, ಲೊನಾವಾಲಾ, ಪುಣೆ, ದೌಂಡ್ ನಿಲ್ದಾಣ ಮೂಲಕ, ಹಜರತ್ ನಿಜಾಮುದ್ದಿನ್- ಎಸ್​ಎಸ್​ಎಸ್ ಹುಬ್ಬಳ್ಳಿ ವೀಕ್ಲಿ ಎಕ್ಸ್​ಪ್ರೆಸ್ ರೈಲು ಮ್ಯಾನಮಾಡ್, ಇಗತ್ಪುರಿ, ಕಲ್ಯಾಣ, ಪಾನ್ವೆಲ್, ಲೊನಾವಾಲಾ, ಪುಣೆ ಮತ್ತು ದೌಂಡ್ ನಿಲ್ದಾಣಗಳ ಮೂಲಕ, ಹಜರತ್ ನಿಜಾಮುದ್ದಿನ್ - ವಾಸ್ಕೊ ಡೈಲಿ ಎಕ್ಸ್​ಪ್ರೆಸ್ ರೈಲು ಮ್ಯಾನಮಾಡ್, ಇಗಾತ್ಪುರಿ, ಕಲ್ಯಾಣ, ಪಾನ್ವೆಲ್, ಲೊನಾವಾಲಾ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net