

ನರಗುಂದ: ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಸದಸ್ಯರು ಉಪ ತಹಸೀಲ್ದಾರ್ ಪರಶುರಾಮ ಕಲಾಲ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕಾಧ್ಯಕ್ಷ ಈರಪ್ಪ ಮ್ಯಾಗೇರಿ ಮಾತನಾಡಿ, ಕನ್ನಡಿಗರ ಬದುಕು ಹಸನಾಗಿಸಲು 1984ರಲ್ಲಿ ಡಾ.ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. 1986 ರಲ್ಲಿ ಸದರಿ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯು ರಾಜ್ಯದಲ್ಲಿರುವ ಕನ್ನಡಿಗರಿಗೆ ಉದ್ಯೋಗ ಸಮಸ್ಯೆಯ ಸ್ವರೂಪವನ್ನು ಅಧ್ಯಯನ ಮಾಡಿ ಕಾರ್ಯ ಸಾಧುವಾದ ಪರ್ಯಾಯ ಮಾರ್ಗಗಳನ್ನು ಹೊಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ.ಸರೋಜಿನಿ ಮಹಿಷಿ ಅವರ ಪರಿಷ್ಕೃತ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಶರಣಪ್ಪ ವಾಲ್ಮೀಕಿ, ಮಕ್ತುಮ ಪರಾಸ, ರಫೀಕ್ ನಾಯ್ಕರ್, ಕುಮಾರ ಚಲವಾದಿ, ಮಕ್ತುಮ ನಾಯ್ಕರ್, ಯೂಸುಫ್ ಸೊಲ್ಲಾಪೂರ, ನದೀಮ ನಾಲಬಂದ, ದಾವಲಸಾಬ ಸವಟಗಿ, ಸೈಯದ್‌ಬಾಷಾ ಡಂಗೆನ್ನವರ ಇದ್ದರು.