ಸಿಸಿ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಮನವಿ

Rmgm-Ph-01-Kanakpura-Ramanagara Road-Gundi - Samsye- Story -1 29-9-2025
Published on

ಲಕ್ಷ್ಮೇಶ್ವರ: ಪಟ್ಟಣದ ಸವಣೂರ ರಸ್ತೆಗೆ ಹೊಂದಿಕೊಂಡಿರುವ ಗುಲಗಂಜಿಕೊಪ್ಪದ ಮುಖ್ಯ ದ್ವಾರದಿಂದ ದುಂಡಿಬಸವೇಶ್ವರ ಮಾರ್ಗದ ವರೆಗೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಸಿಸಿ ರಸ್ತೆಯಾಗಿ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ಗೆ ಕರ್ನಾಟಕ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಈ ರಸ್ತೆಯಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ರೈತರಿಗೂ ಹೊಲಗಳಿಗೆ ಸಂಚರಿಸಲು ದುಸ್ತರವಾಗಿದೆ. ಕೂಡಲೇ ಸಿಸಿ ರಸ್ತೆ ನಿರ್ಮಿಸಿ ಅನೂಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಗ್ರೇಡ್- 2 ತಹಸೀಲ್ದಾರ್ ಮಂಜುನಾತ ಅಮಾಸಿ ಮನವಿ ಸ್ವೀಕರಿಸಿದರು. ಸಮಿತಿ ಅಧ್ಯಕ್ಷ ಮಂಜುನಾಥ ಮಾದರ, ಉಪಾಧ್ಯಕ್ಷ ಮಹಾಂತೇಶ ಪೂಜಾರ, ಕಾರ್ಯದರ್ಶಿ ಕಾರ್ತಿಕ ದೊಡ್ಡಮನಿ, ಗೌರವಾಧ್ಯಕ್ಷ ರಮೇಶ ಹರಿಜನ, ಪರಮೇಶ ಮ್ಯಾಗೇರಿ, ಶಿವಾನಂದ ತಳಗೇರಿ, ಭರಮಪ್ಪ ನಡುವಿನಮನಿ, ಅರುಣ ತಳಗೇರಿ, ಫಕೀರೇಶ ಹರಿಜನ, ತಿಪ್ಪಣ್ಣ ಹರಿಜನ, ಮಂಜುನಾಥ ಹರಿಜನ, ಗುರುನಾಥ ಕಲ್ಮಣಿ, ರವಿಕುಮಾರ ಹರಿಜನ, ವಿನೋದ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net