

ಬೆಳ್ತಂಗಡಿ: ವೇಣೂರು ಸಬ್‌ಸ್ಟೇಷನ್ ಫೀಡರನ್ನು ಐದು ಮೆಗಾ ವೋಲ್ಟ್‌ನಿಂದ ಹತ್ತು ಮೆಗಾ ವೋಲ್ಟ್‌ಗೆ ಪರಿವರ್ತಿಸಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರದ ಗಮನ ಸೆಳೆಯಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನಗರದ ಅಧ್ಯಕ್ಷ ದಯಾನಂದ ದೇವಾಡಿಗ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇಲ್ಲಿ ಎರಡು ವಿದ್ಯುತ್ ಫೀಡರ್‌ಗಳಿದ್ದು ಕಳೆದ ಬಾರಿ ಒಂದು ವಿದ್ಯುತ್ ಫೀಡರನ್ನು 5 ಮೆಗಾವೋಲ್ಟ್‌ನಿಂದ 8 ಮೆಗಾ ವೋಲ್ಟ್‌ಗೆ ಪರಿವರ್ತಿಸಿ ವೇಣೂರು ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಮತ್ತು ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ. ಇದೀಗ ಆಗಾಗ ವಿದ್ಯುತ್ ಕಡಿತವಾಗುವುದರಿಂದ ಈಗ ಬಾಕಿ ಇರುವ ವಿದ್ಯುತ್ ಫೀಡರನ್ನು ಸಹ ಏರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯರಾಮ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ವಂದನಾ ಭಂಡಾರಿ, ತಾಲೂಕು ಆರಾಧನಾ ಸಮಿತಿಯ ಸದಸ್ಯ ಬಾಲಕೃಷ್ಣ ಭಟ್, ಗ್ಯಾರಂಟಿ ಯೋಜನೆಯ ಸದಸ್ಯ ಸತೀಶ್ ಹೆಗ್ಡೆ, ಪಕ್ಷದ ಪ್ರಮುಖರಾದ ರಮೇಶ್ ಪೂಜಾರಿ ಪಡ್ಡಾಯಿಮಜಲ್, ಹರೀಶ್ ಪೊಕ್ಕಿ, ಅಶ್ರಫ್ ಕರಿಮಣೇಲು, ತೋಮಸ್ ಅಂಡಿಂಜೆ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.