ತಳವಾರ ಜನಾಂಗಕ್ಕೆ ಸರ್ಕಾರದ ಸೌಲಭ್ಯ ಸಿಗಲಿ, ಸಮಾಜ ಕಲ್ಯಾಣ ಇಲಾಖೆಗೆ ಮನವಿ

TALAWARA MANAVI
ವಿಜಯಪುರದ ಸಮಾಜ ಕಲ್ಯಾಣ ಇಲಾಖೆಗೆ ತಳವಾರ ಸಮಾಜ ಸೇವಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಶಿವಶರಣ ನಾಟೀಕಾರ, ಸೋಮಶೇಖರ ಜಮಾದಾರ, ಆನಂದ ತಳವಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಪರಿಶಿಷ್ಟ ಪಂಗಡದ ತಳವಾರ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಆಗ್ರಹಿಸಿ ತಳವಾರ ಸಮಾಜ ಸೇವಾ ಸಮಿತಿಯಿಂದ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ 1.25 ಲಕ್ಷ ಜನಸಂಖ್ಯೆ ಹೊಂದಿರುವ ತಳವಾರ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದರೂ ಅನೇಕ ಸೌಲಭ್ಯಗಳಿಂದ ವಂಚಿತಗೊಳ್ಳುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು ಸಕಾಲಕ್ಕೆ ಸಮರ್ಪಕವಾಗಿ ಸಿಗುತ್ತಿಲ್ಲ. ಮಾತೃ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಿಂದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಗಮನ ಹರಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಮುದಾಯದ ಏಳಿಗೆಗಾಗಿ ವಿಜಯಪುರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರು ಮಾಡಬೇಕು. ಶೋಷಿತ ಸಮುದಾಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಬ್ಯಾಕ್‌ಲಾಗ್ ಹುದ್ದೆಗಳಿಗೆ ತಕ್ಷಣದಿಂದಲೇ ಭರ್ತಿ ಮಾಡಿಕೊಳ್ಳಬೇಕು. ಎಸ್‌ಸಿ-ಎಸ್‌ಟಿ ಜನಾಂಗದವರು ದೌರ್ಜನ್ಯಕ್ಕೆ ಒಳಗಾದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತಕ್ಷಣವೇ ಎಸ್‌ಸಿ- ಎಸ್‌ಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡುವಂತೆ ಆದೇಶ ಮಾಡಬೇಕು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಸೌಲಭ್ಯ ಒದಗಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಳವಾರ ಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್‌ಟಿ ಕ್ಷೇತ್ರವನ್ನು ಹೆಚ್ಚಿಸಿ ಆದೇಶ ಮಾಡಬೇಕೆಂದು ಮನವಿ ಮಾಡಿದರು.

ಗೌರವ ಅಧ್ಯಕ್ಷ ಶಿವಶರಣ ನಾಟೀಕಾರ, ಸೋಮಶೇಖರ ಜಮಾದಾರ, ಉಪಾಧ್ಯಕ್ಷ ಆನಂದ ತಳವಾರ, ಪ್ರಧಾನ ಕಾರ್ಯದರ್ಶಿ ಅಭಿಷೇಕ ಜಮಾದಾರ, ನವೀನ ರೂಗಿ, ಚಂದು ಡೊಂಗ್ರೋಜಿ, ವಿಜಯಕುಮಾರ ಚಾಳಿಕಾರ, ನರೇಶ ಜಮಾದಾರ, ರವಿ ರಾಯಜಿ, ಸಂತೋಷ ವಾಲಿಕಾರ, ರೋಹಿತ ನಾಯ್ಕೋಡಿ, ಈಶ್ವರ ಮಣಿಗಿರಿ, ಮಂಜು ಜಮಾದಾರ, ಭೀಮರಾಯ ಬಿಲ್ಕಕ್ಕಾರ, ಹಣಮಂತ ಕೋಳಿ, ಆಕಾಶ ಬೂದಿಹಾಳ, ಗುರುನಾಥ ವಾಲಿಕಾರ, ಶಂಕರ ವಾಲಿಕಾರ, ಲಕ್ಷ್ಮಿಪುರ ಬಡಿಗೇರ, ಬಿ.ಟಿ. ನಾಯ್ಕೋಡಿ, ಚಂದ್ರಾಮ ತಳವಾರ, ಸುನೀಲ ಸಂಗೋಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net