

ಲಕ್ಷ್ಮೇಶ್ವರದ ಹಿರೇಬಣದಲ್ಲಿರುವ ನವೋದಯ ಶಾಲೆಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಶಾಲಾ ಮಕ್ಕಳು, ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೆ ದುರಸ್ತಿ ಕಾರ್ಯ ಕೈಗೊಂಡು ಅನೂಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಿದರು. ಆನಂದ ಅಮರಶಟ್ಟಿ, ನಾಗರಾಜ ಸಾಲಾವಳಿಮಠ, ಮಾಂತೇಶ ಗೊರವರ, ದೇವಪ್ಪ ಅಂಕಲಿ, ಮಾಂತೇಶ ಪೂಜಾರ ಇತರರಿದ್ದರು.