

ಶಿರಹಟ್ಟಿ: ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಅಗತ್ಯ ಕ್ರೀಡಾ ಪರಿಕರಗಳನ್ನು ನೀಡಬೇಕು ಎಂದು ಪ್ರಜಾಪರ ವೇದಿಕೆ ವತಿಯಿಂದ ತಹಸೀಲ್ದಾರ್ ಅನಿಲ ಬಡಿಗೇರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ತಾಲೂಕು ಅಧ್ಯಕ್ಷ ಹಸನ್ ತಹಶೀಲ್ದಾರ ಮಾತಾನಾಡಿ, ಪ್ರತಿದಿನ ನೂರಾರು ಜನರು ವಾಹುವಿಹಾರಕ್ಕಾಗಿ ಕ್ರೀಡಾಂಗಣಕ್ಕೆ ಬರುತ್ತಾರೆ. ಜನರಿಗೆ ವ್ಯಾಯಾಮ ಮಾಡಲು ಯಾವುದೇ ಪರಿಕರಗಳು ಇಲ್ಲ. ಮೈದಾನವೂ ಸುಸಜ್ಜಿತವಾಗಿಲ್ಲ. ಸರ್ಕಾರ ಕ್ರಿಡಾಂಗಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದರು.
ಶರೀಫ ಗುಡಿಮನಿ, ಹಾಲಪ್ಪ ಬಡೆಣ್ಣವರ, ವೀರೇಶ ಭೋರಶೆಟ್ಟರ, ಬಸವರಾಜ ಗುಡಿಮನಿ, ಕಳಕಪ್ಪ ಬಿಸನಳ್ಳಿ, ಗಾಳೆಪ್ಪ ಮರ್ಚಣ್ಣವರ ಇದ್ದರು.