ವೆಂಕಟರಮಣೇಗೌಡ ಬೆಂಬಲಿಸುವಂತೆ ಮನವಿ

oppo_2
ಮದ್ದೂರು ಪಟ್ಟಣದ ಶಿವಪುರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಕೆ.ಎಂ. ಉದಯ್ ಮಾತನಾಡಿದರು. ಎಚ್.ಎನ್. ನಾಗರಾಜು, ಶ್ರೀಧರ್, ಸುರೇಶ್ ಕಂಠಿ, ಹೊಂಬಯ್ಯ, ಚಿದಂಬರಮೂರ್ತಿ, ದೊರೆಸ್ವಾಮಿ ಇದ್ದರು.
Published on

ಮದ್ದೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಹೆಚ್ಚು ಅಂತರದಿಂದ ಗೆಲ್ಲಿಸುವ ಮೂಲಕ ಲೋಕಸಭೆಗೆ ಕಳಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದ ಶಿವಪುರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಟಾರ್ ಚಂದ್ರು ಸರಳ, ಸಜ್ಜನಿಕೆ ಹಾಗೂ ಸಮಾಜಮುಖಿ ಚಿಂತನೆ ಇರುವ ವ್ಯಕ್ತಿ. ಜತೆಗೆ ಮಂಡ್ಯ ಜಿಲ್ಲೆಯವರಾಗಿದ್ದು, ಜನತೆಗೆ ಸುಲಭವಾಗಿ ಸಿಗುತ್ತಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಈ ನೆಲದ ಮಣ್ಣಿನ ಮಗನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಾತಿ ಜಾತಿಗಳ ನಡುವೆ ಕಂದಕ ತಂದಿಟ್ಟು ಅದನ್ನು ಬಂಡವಾಳವಾಗಿ ಮಾಡಿಕೊಂಡಿರುವ ಬಿಜೆಪಿಯವರು ತಮ್ಮ ಮತ ಬ್ಯಾಂಕ್ ಅನ್ನು ಭದ್ರ ಮಾಡಿಕೊಳ್ಳುವ ಸಂಚು ರೂಪಿಸಿದ್ದಾರೆ. ಅದನ್ನು ಎಲ್ಲರೂ ಒಗ್ಗಟ್ಟಿನಿಂದ ಛಿದ್ರ ಮಾಡಬೇಕು ಎಂದು ತಿಳಿಸಿದರು

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಲಿದೆ. ಬಡ ಕುಟುಂಬಕ್ಕೆ ವಾರ್ಷಿಕ ಒಂದು ಲಕ್ಷ ರೂ. ಸಹಾಯಧನ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಆದ್ದರಿಂದ ಈ ಬಾರಿ ಅಭಿವೃದ್ಧಿಗಾಗಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಎಸ್ಸಿ-ಎಸ್ಟಿ ಘಟಕದ ರಾಜ್ಯ ಸಂಚಾಲಕ ಎಚ್.ಎನ್. ನಾಗರಾಜು, ಜಿಲ್ಲಾಧ್ಯಕ್ಷ ಶ್ರೀಧರ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಹೊಂಬಯ್ಯ, ಕೆಪಿಸಿಸಿ ಸದಸ್ಯ ಕಾಡುಕೊತ್ತನಹಳ್ಳಿ ಚಿದಂಬರ ಮೂರ್ತಿ, ಎಸ್ಸಿ-ಎಸ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊರೆಸ್ವಾಮಿ, ಮುಡಿನಹಳ್ಳಿ ತಿಮ್ಮಯ್ಯ, ಮುಖಂಡರಾದ ಕಚೇಲ, ಶಶಿಕಲಾ, ಸುಮಾ, ನಾಗಭೂಷಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net