ಯೂರಿಯಾ ಗೊಬ್ಬರ ಪೂರೈಸಲು ಮನವಿ

MANAVI HIREKERUR
Published on

ಹಿರೇಕೆರೂರ: ತಾಲೂಕಿನಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗಿದ್ದು, ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಿದೆ. ಆದ್ದರಿಂದ ಯೂರಿಯಾ ಕೊರತೆ ನಿವಾರಿಸಲು ಒತ್ತಾಯಿಸಿ ಭಾರತೀಯ ಕೃಷಿ ಕಾರ್ವಿುಕರ ರೈತ ಸಂಘಟನೆ ತಾಲೂಕು ಘಟಕದಿಂದ ಪಟ್ಟಣದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ವಿ. ಮಂಜುನಾಥ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ತಾಲೂಕಿನಲ್ಲಿ ಬಿಡುವಿಲ್ಲದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿದೆ. ಇದರಿಂದ ಮೆಕ್ಕೆಜೋಳ ಬೆಳೆ ಹಾಳಾಗುವ ಸಾಧ್ಯತೆಯಿದೆ. ಬೆಳೆ ಕಾಪಾಡಿಕೊಳ್ಳಲು ರೈತರಿಗೆ ಯೂರಿಯಾ ಗೊಬ್ಬರದ ತುರ್ತು ಅವಶ್ಯಕತೆಯಿದೆ. ರೈತರ ಬೇಡಿಕೆಗೆ ತಕ್ಕಂತೆ ಯೂರಿಯಾ ರಸಗೊಬ್ಬರವನ್ನು ಅಧಿಕಾರಿಗಳು ಪೂರೈಸಬೇಕು ಎಂದು ಆಗ್ರಹಿಸಿದರು.

ರೈತ ಸಂಘಟನೆ ಪದಾಧಿಕಾರಿಗಳಾದ ಶಿವಪ್ಪ ಜವನವರ, ಬಸಪ್ಪ ಕೆಳಗಿನಮನಿ, ಯಶವಂತ ತಿಮಕಾಪುರ, ಲೋಕೇಶ ಮುತ್ತಗಿ, ಅರುಣಕುಮಾರ ಆರಿಕಟ್ಟಿ, ಈರಪ್ಪ ಮಳವಳ್ಳಿ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net