ಅನಧಿಕೃತ ಮೀನು ಮಾರಾಟಕ್ಕೆ ತಡೆಯೊಡ್ಡಲು ಮನವಿ

Request
Published on

ಯಲ್ಲಾಪುರ : ಪಟ್ಟಣದಲ್ಲಿ ಅನಧಿಕೃತ ಮೀನು ಮಾರಾಟಕ್ಕೆ ತಡೆಯೊಡ್ಡಬೇಕೆಂದು ತಟಗಾರ, ಶೀಗೆಪಾಲ,ಹುಟಕಮನೆ, ಬಾಳಗಿಮನೆ ಹಾಗೂ ಪಟ್ಟಣದ ನಾಗರಿಕರು ತಹಸೀಲ್ದಾರ ಅಶೋಕ ಭಟ್ಟ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

 ಪಟ್ಟಣದಲ್ಲಿ ಅಧಿಕೃತ ಮೀನು ಮಾರುಕಟ್ಟೆ ಇದ್ದರೂ, ಪಟ್ಟಣದ ತಟಗಾರ್ ರಸ್ತೆ ಹಾಗೂ ಇತೆರೆಡೆಗಳಲ್ಲಿ ರಸ್ತೆ ಬದಿಯಲ್ಲಿ ಹಾಗೂ ಕೆಲವು ಮನೆಗಳಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸುತ್ತ ಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದೆ. ಸಾರ್ವಜನಿಕರು ಓಡಾಡಲು, ಹಾಗೂ ವಾಹನಗಳ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ. 

 ಪಟ್ಟಣದಲ್ಲಿ ಡೆಂಘಿ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು , ಸಾರ್ವಜನಿಕ ಪ್ರದೇಶದಲ್ಲಿ ಮೀನು ಮಾರಾಟದಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗುತ್ತಿದೆ. ಪಟ್ಟಣ ಪಂಚಾಯಿತಿಗೆ ಅನೇಕ ಬಾರಿ ಮನವಿ ನೀಡಿದರೂ ಈ ಕುರಿತು ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮೀನು ಮಾರಾಟಗಾರ ಮಾಡುವವರನ್ನು ಅಧಿಕೃತ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ ಅಶೋಕ ಭಟ್ಟ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

   ಬಸವರಾಜ ಗಾಳಪ್ಪನವರ್, ಫಾರುಕ ಗೌಸ್, ಮಹಮ್ಮದ ರಫೀಕ್, ನಾಗರಾಜ ಅಂಕೋಲೆಕರ್, ಸೈಯ್ಯದ ಯಾಕೂಬ ಸೈಯ್ಯದ, ಪ್ರಕಾಶ ವೈದ್ಯ, ಕೆ.ಟಿ.ಹೆಗಡೆ, ಸಿ.ಎನ್.ಹೆಗಡೆ, ಎನ್.ವಿ ಸಭಾಹಿತ, ವಿ.ಅರ್.ಭಟ್ಟ, ಎ.ಟಿ.ಭಟ್ಟ, ವಿ.ಕೆ.ಭಟ್ಟ, ಗಣಪತಿ ಭಟ್ಟ, ಮಂಜುನಾಥ ಭಟ್ಟ, ಕೃಷ್ಣ ಭಟ್ಟ, ವೆಂಕಟ್ರಮಣ ಭಟ್ಟ, ಸುಬ್ರಹ್ಮಣ್ಯ ಹಂಗಾರಿ, ನರಸಿಂಹ ಬೋಳಪಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net