

ಬೆಳಗಾವಿ: ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿ ತಾಲೂಕಿನ ಸಾವಗಾಂವ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ತಡೆಯಲು ಮುಂದಾಗಿದ್ದ ಗ್ರಾಮದ ಕೆಲವರನ್ನು ನೈತಿಕ ಪೊಲೀಸ್‌ಗಿರಿ ಆರೋಪದ ಮೇಲೆ ಗ್ರಾಮೀಣ ಪೊಲೀಸರು ಬಂಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಗ್ರಾಮದ ಕಾಲೇಜು, ಜಲಾಶಯ ಹತ್ತಿರದ ಜಮೀನಿನಲ್ಲಿಯೇ ಗಾಂಜಾ, ಮದ್ಯಪಾನ ಸೇವನೆ ಅಕ್ರಮವಾಗಿ ನಡೆಯುತ್ತಿವೆ. ಇದರಿಂದ ಗ್ರಾಮದಲ್ಲಿ ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಓಡಾಡಲು ಮುಜುಗರ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಇದರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಗ್ರಾಪಂ ಅಧ್ಯಕ್ಷ ವೈ.ಎಂ. ಪಾಟೀಲ, ಸಂತೋಷ ಪಾಟೀಲ, ಮಾಯಪ್ಪ ಘಾಟೆಗಸ್ತಿ, ಕಲ್ಲಪ್ಪ ಪಾಟೀಲ ಇತರರಿದ್ದರು.