ಅಧಿವೇಶನದಲ್ಲಿ ಒಳ ಮೀಸಲಾತಿ ವಿಷಯ ಪ್ರಸ್ತಾಪಿಸಲು ಮನವಿ

Request to raise the issue of internal reservation in the session
Published on

ಹಿರೇಕೆರೂರ: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿ ಕುರಿತು ಚಳಿಗಾಲದ ಅಧಿವೇಶನದಲ್ಲಿ ಮಾದಿಗ ಸಮುದಾಯದ ಪರವಾಗಿ ಮಾತನಾಡಬೇಕು ಎಂದು ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ, ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕು ಘಟಕಗಳ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಪಟ್ಟಣದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.

ಎ.ಜೆ. ಸದಾಶಿವ ಆಯೋಗದ ವರದಿ ಇಟ್ಟಕೊಂಡು ನಮ್ಮ ಮಾದಿಗ ಸಮಾಜದ ವಕೀಲರು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ದಾಖಲಿಸಿದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ತೀರ್ಪು ನೀಡಿದೆ. ತೀರ್ಪು ಬಂದರೂ ಸರ್ಕಾರ ಈವರೆಗೂ ಅದನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಈಗಾಗಲೇ 2011ರ ಜನಗಣತಿ ಪ್ರಕಾರ ಸರ್ಕಾರಕ್ಕೆ ಮಾಹಿತಿ ಇದ್ದರೂ ನ್ಯಾ. ನಾಗಮೋಹನ ದಾಸ್ ಅವರ ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂಬ ಕಾಲ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಆದ್ದರಿಂದ ನಮ್ಮ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸಂಘಟನೆಗಳ ಪ್ರಮುಖರಾದ ಮಹಾದೇವಪ್ಪ ಮಾಳಮ್ಮನವರ, ಬಿ.ಆರ್. ಪುಟ್ಟಣ್ಣನವರ, ಮಾಲತೇಶ ಬಿಲ್ಲಳ್ಳಿ, ಹನುಮಂತ ಗಾಜೇರ, ಶಿವಾಜಿ ದೊಡ್ಮನಿ, ಪ್ರಶಾಂತ ತಿರಕಪ್ಪನವರ, ನಾಗರಾಜ ನಡುವಿನಮನಿ, ಕುಮಾರ ದ್ಯಾವಣ್ಣನವರ, ಭರಮಪ್ಪ ಹರಿಜನ, ಮಾಲತೇಶ ಮಾದರ ಗೋಣೆಪ್ಪ ಕೆಳಗೇರಿ, ಕಾಂತೇಶ ಬಾಲಬಸಮ್ಮನವರ, ಶೇಖಪ್ಪ ನಡುಗೇರಿ, ನಾಗಪ್ಪ ಹರಿಜನ, ಸಿದ್ದಪ್ಪ ಹರಿಜನ, ನಾಗರಾಜ ಹರಿಜನ, ಹೊನ್ನಪ್ಪ ಮಡ್ಲೂರ, ರಾಜು ಯತ್ತಿನಹಳ್ಳಿ, ನಾಗರಾಜ ಬಾತಮ್ಮನವರ, ಬಸವರಾಜ ಕಾಲ್ವೀಹಳ್ಳಿ, ಮಲ್ಲೇಶ ಬಸರಿಹಳ್ಳಿ ಹಾಗೂ ಮಾದಿಗ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net