ಹೊನ್ನೂರು ಪ್ರಕಾಶ್ ವಿರುದ್ಧದ ದೂರು ರದ್ದುಪಡಿಸಲು ಮನವಿ

Oplus_16908288
ಹೊನ್ನೂರು ಪ್ರಕಾಶ್ ಅವರ ಮೇಲೆ ದಾಖಲಾಗಿರುವ ದೂರು ವಾಪಸ್ ಪಡೆಯುವಂತೆ ಶಿರಸ್ತಿಧಾರ್ ರಾಜು ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.
Published on

ನಂಜನಗೂಡು: ಚಾಮರಾಜನಗರ ಜಿಲ್ಲಾ ಆಡಳಿತ ಮುಂಭಾಗ ಕೆಎಂಎಫ್ ಚಾಮುಲ್ ಅವೈಜ್ಞಾನಿಕವಾಗಿ ಐಸ್ ಕ್ರೀಮ್ ಘಟಕ ಸ್ಥಾಪನೆ ವಿರುದ್ಧ ಚಳವಳಿ ನಡೆಸುತ್ತಿದ್ದ ರೈತ ಮುಖಂಡ ಹೊನ್ನೂರು ಪ್ರಕಾಶ್ ಅವರ ವಿರುದ್ಧ ದೂರು ದಾಖಲಾಗಿದ್ದು, ಈ ದೂರನ್ನು ವಾಪಸ್ ಪಡೆಯುವಂತೆ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಒತ್ತಾಯಿಸಿದರು.

ಬಳಿಕ ಜಿಲ್ಲಾಧ್ಯಕ್ಷ ಸತೀಶ್ ಮಾತನಾಡಿ, ರೈತ ಮುಖಂಡ ಹೊನ್ನೂರು ಪ್ರಕಾಶ್ ಅವರು ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಅಸಂವಿಧಾನಕ ಪದವನ್ನು ಬಳಕೆ ಮಾಡಿಲ್ಲ. ಆದರೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಅಹಿಂದ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ವತಿಯಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಕಾಶ್ ಅವರ ವಿರುದ್ಧ ನೀಡಿರುವ ದೂರನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ತಾಲೂಕು ಕಚೇರಿಯ ಶಿರಸ್ತೇದಾರ್ ರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಹಗಿನವಾಳು ಚಿಕ್ಕಯ್ಯ, ತಾಲೂಕು ಅಧ್ಯಕ್ಷ ಸೂರಹಳ್ಳಿ ಮಹೇಶ್, ಶಿರಮಳ್ಳಿ ರತ್ನಮ್ಮ, ಖಚಾಂಚಿ ಕೇಬಲ್ ಬಸಪ್ಪ, ಡಿ ಎಮ್ ಬಸವಣ್ಣ, ಹಸಿರು ಸೇನೆಯ ಧಮೇರ್ಂದ್ರ, ಬಸವಣ್ಣ, ಸಿದ್ದರಾಜು, ಪಾಪಣ್ಣ, ಕೂಸಣ್ಣ, ಕುಲಗಾಣ ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net