

ಮೂಡಲಗಿ: ಪಟ್ಟಣದ ಬಣಜಿಗ ಸಮಾಜ ಕ್ಷೇಮಾಭಿವದ್ಧಿ ಸಂಘಕ್ಕೆ ನಿವೇಶನ ನೀಡಲು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ಪಟ್ಟಣದ ಲಕ್ಷ್ಮೀ ನಗರದಲ್ಲಿ ಬಣಜಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಟಿಎಂಸಿ ನಂ. 1837 ಖಾಲಿ ಪ್ಲ್ಯಾಟನ್ನು ಬಣಜಿಗ ಸಮುದಾಯದ ವಿವಿಧ ಕಾರ್ಯಕ್ರಮ ನಡೆಸಲು ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಿಕೊಳ್ಳಲು ನಿವೇಶನ ನೀಡಲು ಮನವಿಯಲ್ಲಿ ತಿಳಿಸಿದ್ದಾರೆ.
ಬಣಜಿಗ ಸಮುದಾಯದ ತಾಲೂಕಾಧ್ಯಕ್ಷ ಶಿವಪ್ಪ ಬುಜನ್ನವರ, ಸಂಗಪ್ಪ ಅಂಗಡಿ, ವಿ.ಸಿ. ಗಾಡವಿ, ಗಂಗಪ್ಪ ಪುಠಾಣಿ, ವಿ.ಎಸ್.ಸಬರದ, ಅನ್ವರ್ ನದಾಫ್, ರಮೇಶ ಸಣ್ಣಕ್ಕಿ, ಎಲ್.ಸಿ.ಗಾಡವಿ ಇತರರಿದ್ದರು.