ನಿಡುಬೆ ಅಂಗನವಾಡಿಗೆ ಅನುದಾನ ಒದಗಿಸಲು ಮನವಿ

Sul_Manavi
Published on

ಸುಳ್ಯ: ತಾಲೂಕಿನ ಐವರ್ನಾಡು ಗ್ರಾಮದ ನಿಡುಬೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಇತ್ತೀಚೆಗೆ ಮನವಿ ನೀಡಲಾಯಿತು.

ಇದೇ ವೇಳೆ ಪರ್ಲಿಕಜೆ, ನಿಡುಬೆ, ಕೊಚ್ಚಿ ರಸ್ತೆ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಯಿತು. ರಸ್ತೆ ಅಭಿವೃದ್ಧಿಗಾಗಿ ಅನುದಾನ ತರಿಸಿಕೊಡುವ ಬಗ್ಗೆ ಶಾಸಕಿ ಭರವಸೆ ನೀಡಿದರು.

ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ನಾಟಿಕೇರಿ, ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಕಲಾ, ವೆಂಕಪ್ಪ ಗೌಡ ಜೆ.ಟಿ, ಮಹೇಶ ಜಬಳೆ, ವಾಸುದೇವ ಬೊಳುಬೈಲು, ರಾಜೇಂದ್ರ ಪಾತಿಕಲ್ಲು, ಶರತ್ ಜಬಳೆ, ಸಚಿನ್ ಕೊಚ್ಚಿ, ಪ್ರಸಾದ್ ಜಬಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net