

ಲಕ್ಷ್ಮೇಶ್ವರ: ಪಟ್ಟಣದ ಕೌಡೇಶ್ವರ ನಗರದ ನಿವಾಸಿಗಳು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 8ರಲ್ಲಿ 15 ವರ್ಷಗಳಿಂದ ಮೂಲಸೌಲಭ್ಯ ಕಲ್ಪಿಸಿಲ್ಲ. ಮನೆ ತೆರಿಗೆ, ನೀರಿನ ಬಿಲ್ ಪಾವತಿಸುತ್ತಿದ್ದೇವೆ. ಆದರೂ ಚರಂಡಿ, ರಸ್ತೆ, ನೀರು ಸೇರಿ ಅಗತ್ಯ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಮಳೆ ಬಂದರೆ ಮನೆಗಳಿಗೆ ಚರಂಡಿ ನೀರು ನುಗ್ಗುತ್ತದೆ. ಈ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ರಾಘುಸ್ವಾಮಿ ಬನ್ನಿ, ನೀಲಪ್ಪಗೌಡ ಹೊಸಗೌಡ್ರ, ಶೇಖಪ್ಪ ಕೋರಿ, ಮಹೇಶ ಹಾದಿಮನಿ, ಸುರೇಶ ಗೊಜಗೋಜಿ, ಮಲ್ಲೇಶ ಬನ್ನಿ, ನಾಗಪ್ಪ ಕೋರಿ, ಗಿರೀಶ ಉಳ್ಳಟ್ಟಿ, ಜಯಶ್ರೀ ಕೋಷ್ಟಿ, ಪಾರವ್ವ ಬನ್ನಿ, ಬೀಬಿಜಾನ ನದಾಫ್, ಸಿದ್ದಮ್ಮ ಪೂಜಾರ, ಗಂಗಮ್ಮ ಗೊಜಗೋಜಿ, ಲಕ್ಷ್ಮವ್ವ ಕೋರಿ, ಈರವ್ವ ಕೋರಿ, ರತ್ನಮ್ಮ ಹೊಸಗೌಡ್ರ, ದ್ಯಾಮವ್ವ ಗೊಜಗೋಜಿ, ರೇಖಾ ಬನ್ನಿ ಇದ್ದರು.