

ಲಕ್ಷ್ಮೇಶ್ವರ: ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪಟ್ಟಣದ ವಾರ್ಡ್ ನಂ.1 ರ ವ್ಯಾಪ್ತಿಯ ಕೌಡೇಶ್ವರಿ ಬಡಾವಣೆಯ ನಿವಾಸಿಗಳು ಮಂಗಳವಾರ ಪುರಸಭೆಗೆ ಮನವಿ ಸಲ್ಲಿಸಿದರು.
ಕೌಡೇಶ್ವರಿ ಬಡಾವಣೆಯಲ್ಲಿ 15-20 ವರ್ಷಗಳಿಂದ ಸರಿಯಾದ ರಸ್ತೆ, ಚರಂಡಿ ಬೀದಿದೀಪ, ಮಹಿಳಾ ಸಾರ್ವಜನಿಕ ಶೌಚಗೃಹ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಇದೀಗ ಮಳೆಗಾಲವಾಗಿದ್ದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂಚಾರ ಕಷ್ಟವಾಗಿದೆ.
ನೀರು ರಸ್ತೆಯಲ್ಲಿಯೇ ಹರಿಯುವುದರಿಂದ ಕೊಳಚೆ ನಿರ್ಮಾಣವಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಿದೆ. ಚಿಕ್ಕ ಮಕ್ಕಳು, ವೃದ್ದರು ರಸ್ತೆಯಲ್ಲಿ ನಿತ್ಯ ಸಂಚರಿಸುವಾಗ ಜೀವಭಯ ಕಾಡುವಂತಾಗಿದೆ. ಆದ್ದರಿಂದ ರಸ್ತೆಗಳನ್ನು ತಾತ್ಕಾಲಿಕ ಸುಧಾರಣೆ, ಕಚ್ಚಾ ಚರಂಡಿ ನಿರ್ಮಾಣ, ಸ್ವಚ್ಛತೆ ಕಾಪಾಡುವ ಕೆಲಸವನ್ನು ತಕ್ಷಣಕ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು. ಎಸ್.ಆರ್. ಕೋರಿ, ಬಿ.ಎನ್. ಪಡಗೇರಿ, ಮೈಲಾರಪ್ಪ ಪಡಿಗೇರಿ, ನೀಲಪ್ಪ ಪಡಗೇರಿ, ಬಿ.ಎಚ್. ಬೂದಿಹಾಳ, ಬಸವರಾಜ ಗೊಜಗೊಜಿ, ಗಂಗವ್ವ, ಪಿ.ಸಿ. ಪಾಟೀಲ, ವಿದ್ಯಾ ಬನ್ನಿ, ಪಾರ್ವತಿ ಬನ್ನಿ, ಎಸ್.ಎನ್. ಕೋರಿ, ಪಾರವ್ವ ಬನ್ನಿ, ಜಯಶ್ರೀ ಕೋಷ್ಠಿ, ನೀಲವ್ವ, ವನವ್ವ, ಶಿವಲೀಲಾ ಬನ್ನಿ, ನಿರ್ಮಲಾ ಗೊಜಗೊಜಿ, ರೇಣುಕಾ ಖಂಡ್ರೆನವರ, ನಿರ್ಮಲಾ, ಯಲ್ಲವ್ವ ಇತರರಿದ್ದರು.