

ಧಾರವಾಡ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನೇತೃತ್ವದಲ್ಲಿ 11ನೇ ವರ್ಷದ ಡಿಜಿ ಇಮೇಜ್-2025 ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ಏ. 11, 12 ಮತ್ತು 13ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಪ್ರದರ್ಶನ ನಡೆಯಲಿದೆ.
ದೇಶ-ವಿದೇಶಗಳಿಂದ ಪ್ರಸಿದ್ಧ ಛಾಯಾಗ್ರಾಹಕರು, ಛಾಯಾಗ್ರಹಣ ಸಾಧನ ವಿತರಕರು ಹಾಗೂ ಛಾಯಾಗ್ರಹಣ ಪ್ರಿಯರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ನೂತನ ಕ್ಯಾಮರಾಗಳು, ಲೆನ್ಸ್ಗಳು, ಡ್ರೋನ್ಗಳು, ಸ್ಟುಡಿಯೋ ಉಪಕರಣಗಳು ಸೇರಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಎಲ್ಲ ತಂತ್ರಜ್ಞಾನಗಳನ್ನು ಪ್ರದರ್ಶನಕ್ಕಿಡಲಾಗಿದೆ.
ನುರಿತ ಛಾಯಾಗ್ರಾಹಕರಿಂದ ಕಾರ್ಯಾಗಾರಗಳು, ಸಂವಾದಗಳು ಹಾಗೂ ಲೈವ್ ಡೆಮೋಗಳು ನಡೆಯಲಿವೆ. ಈ ಛಾಯಾಗ್ರಹಣ ಮಹಾಮೇಳಕ್ಕೆ ರಾಜ್ಯದ ಮತ್ತು ದೇಶದ ಎಲ್ಲ ಛಾಯಾಗ್ರಾಹಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೆಪಿಎ ನಿರ್ದೇಶಕ ಪ್ರಭಯ್ಯ ಶಿವಯ್ಯ ಲಕ್ಕುಂಡಿಮಠ ಮನವಿ ಮಾಡಿದ್ದಾರೆ.