ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರ ತೆರೆಯಲು ಮನವಿ

MANAVI
Published on

ನರಗುಂದ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹೊಸ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಕಾರ್ಯಕ್ಕೆ ಹೆಚ್ಚುವರಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ತಹಸೀಲ್ದಾರ್ ಶ್ರೀಶೈಲ ತಳವಾರಗೆ ಮಂಗಳವಾರ ಮನವಿ ಸಲ್ಲಿಸಿದರು.

ಕರವೇ ತಾಲೂಕು ಅಧ್ಯಕ್ಷ ನಭಿಸಾಬ ಕಿಲ್ಲೇದಾರ ಮಾತನಾಡಿ, ವಿದ್ಯಾರ್ಥಿಗಳ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಸ್ಕಾಲರ್‌ಶಿಪ್ ವಿತರಣೆ ಮುಂತಾದ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಕೆಲ ಮಕ್ಕಳ ಹೊಸ ಆಧಾರ್ ಕಾರ್ಡ್‌ಗಳು ಇದುವರೆಗೆ ಬಂದಿಲ್ಲ. ಕೆಲ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳಲ್ಲಿ ಸಣ್ಣ ದೋಷಗಳಿದ್ದು ತಿದ್ದುಪಡಿ ಮಾಡಿಸಲು ಕಚೇರಿಗೆ ಅಲೆದಾಡುವಂತಾಗಿದೆ. ಪಟ್ಟಣದಲ್ಲಿ ಒಂದೇ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಇರುವುದರಿಂದ ಸಾಕಷ್ಟು ವಿಳಂಬವಾಗಿತ್ತಿದೆ ಹೀಗಾಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಕರವೇ ನಗರ ಘಟಕದ ಅಧ್ಯಕ್ಷ ಮಾರುತಿ ಪವಾರ, ಮಹಾದೇವ ಆಸೇದಾರ, ಇಮಾಮ್ ಹದ್ಲಿ, ಹಜರತಲಿ ನಾಲಬಂದ, ಜ್ಞಾನೇಶ ಹಡಪದ, ಯೂಸೂಫ್ ಲೋಧಿ, ಎಸ್.ಎಂ.ಕರಮನಿ, ವಿಜಯ ಬಡಿಗೇರ, ಅನಿಲ ಜಮಖಂಡಿ, ಈರಣ್ಣ ತಳವಾರ, ನಿಂಗಪ್ಪ ಸವದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net