ಕುಣಬಿ ಸಮಾಜ ಎಸ್ಟಿಗೆ ಸೇರಿಸಲು ಸಂಸದ ಕಾಗೇರಿಗೆ ಮನವಿ

SIRSI KUNSBI MANAVI
Published on

ಶಿರಸಿ: ಕುಣಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಸಮಾಜದ ಪ್ರಮುಖರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬುಧವಾರ ಮನವಿ ಸಲ್ಲಿಸಿದರು.

ಕುಣಬಿಗಳು ಕಾಡು, ಪರಿಸರ, ಜಲ, ನೆಲ, ನದಿಮೂಲ, ಕಾಡಿನ ಕಿರು ಉತ್ಪನ್ನ ಗಿಡಮೂಲಿಕೆ ಜ್ಞಾನ, ಗೆಡ್ಡೆ ಗೆಣಸು, ಕಾಡು ದೇವರೆಂದು ಪೂಜಿಸಿ, ಕುಮರಿ ಜಮೀನು ಸಾಗುವಳಿ ಮಾಡಿಕೊಂಡು ತಲತಲಾಂತರದಿಂದ ಬುಡಕಟ್ಟು ಸಂಸ್ಕೃತಿಯಲ್ಲಿ ಕಾಡಿನ ಮಧ್ಯೆ ವಾಸಮಾಡಿಕೊಂಡು ಬಂದಿದ್ದಾರೆ. ನಮ್ಮ ದೇವರು, ದೇವತಾರಗಳು, ಜಾನಪದ ಸಾಂಪ್ರದಾಯ, ಹಬ್ಬದಿನಗಳು, ಮದುವೆ ಪದ್ಧತಿ ಆಚರಣೆ, ಹೀಗೆ ಬುಡಕಟ್ಟು, ಸಾಂಸೃ್ಕಕ ಬದುಕು ಕಟ್ಟಿಕೊಂಡು, ಪರಿಸರಕ್ಕೆ ಯಾವುದೇ ತೊಂದರೆ ನೀಡದೇ ಕಾಡಿನ ಮಧ್ಯೆ ಶತಮಾನಗಳಿಂದ ನೆಮ್ಮದಿಯಲ್ಲಿ ಬದುಕುತ್ತಿದ್ದೇವೆ. 1992 ನೇ ಸಾಲಿನಲ್ಲಿ ಕುಣಬಿ ಸಮಾಜ ಸಂಘಟನೆ ರಚನೆ ಮಾಡಿ ಹೋರಾಟದ ಮೂಲಕ 2001 ರಲ್ಲಿ ಪ್ರವರ್ಗ 1 ಸ್ಥಾನಮಾನ ಲಭಿಸಿತು. ನಮ್ಮನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಬೇಕೆಂದು ಅನೇಕ ಸಲ ಸತ್ಯಾಗ್ರಹ ಮಾಡಿದರೂ ಕಳೆದ 25 ವರ್ಷಗಳಿಂದ ನಮ್ಮ ಹೋರಾಟಕ್ಕೆ ಮನ್ನಣೆ ಸಿಕ್ಕಿಲ್ಲ. 2003 ರಲ್ಲಿ ನೆರೆಯ ಗೋವಾ ರಾಜ್ಯದ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ಪ್ರೇಮಾನಂದ ವೇಳಿಪ, ಕೃಷ್ಣ ಮಿರಾಶಿ, ಚಂದ್ರಶೇಖರ ಸಾವರಕರ, ದಯಾನಂದ ಕುಮಗಾಳಕರ, ಪ್ರಭಾಕರ ವೇಳಿಪ, ಪರಮೇಶ್ವರ ಕುಣಬಿ, ನಾರಾಯಣ ಕುಣಬಿ, ಪುಟ್ಟಾ ಕುಣಬಿ, ಚಂದ್ರಶೇಖರ ಕುಣಬಿ, ಮಹೇಶ ಕುಣಬಿ, ರವಿ ಕುಣಬಿ, ಬಾಲಚಂದ್ರ ಕುಣಬಿ, ಪರಮೇಶ್ವರ ಗೌಡ, ಸದಾನಂದ ಗೌಡ, ಉಮೇಶ ಗೌಡ, ಮಹಾಬಲೇಶ್ವರ ಗೌಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net