ರಸ್ತೆ ಅಭಿವೃದ್ಧಿಗೆ ಶಾಸಕ ಬಣಕಾರಗೆ ಮನವಿ

Appeal to MLA UB Bankara
Published on

ಹಿರೇಕೆರೂರ: ಪಟ್ಟಣದ ತೋಂಟದ ವೀರಭದ್ರೇಶ್ವರ ದೇವಸ್ಥಾನ ಮಾರ್ಗವಾಗಿ ದುರ್ಗಾದೇವಿ ದೇವಸ್ಥಾನಕ್ಕೆ ಹೋಗಿ ಬರುವ ರಸ್ತೆ ಸರಿಪಡಿಸುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದುರ್ಗಾದೇವಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಬುಧವಾರ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ದುರ್ಗಾದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ ಮಾತನಾಡಿ, ಪಟ್ಟಣದಿಂದ ಸೋಮನಹಳ್ಳಿಯವರೆಗೆ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಮುಂದಿನ ಪ್ರಕ್ರಿಯೆ ನಡೆದಿಲ್ಲ. ಚೌಡಿ ವೃತ್ತದಿಂದ ತೋಂಟದ ವೀರಭದ್ರೇಶ್ವರ ದೇವಸ್ಥಾನ ಮೂಲಕ ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ರಸ್ತೆ ಹಾಳಾಗಿದ್ದು, ಭಕ್ತರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ದೇವಿಯ ಜಾತ್ರಾ ದಿನಗಳು ಸಮೀಪಿಸುತ್ತಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮಾಡಿಸಿಕೊಡುವಂತೆ ಆಗ್ರಹಿಸಿದರು.

ಪಪಂ ಸದಸ್ಯ ಹರೀಶ ಕಲಾಲ್, ಮಂಜುನಾಥ ತಂಬಾಕದ, ಮೈಲಾರೆಪ್ಪ ದಿಂದೇರ, ಸತೀಶ ನಾಡಿಗೇರ, ಶಂಭು ಹಂಸಭಾವಿ, ಆನಂದ ನಾಯ್ಕರ್, ಪಿ.ಬಿ. ಗುಬ್ಬಿ, ಸಿದ್ದು ತಂಬಾಕದ ಹಾಗೂ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net