ಡಿ.ಯು.ಅರ್ಪಿತಾ ಪತ್ತೆಗೆ ಮನವಿ

11-pnp 1 D.U.ARPITHA
ಕಾಣೆಯಾದ ಯುವತಿ ಡಿ.ಯು.ಅರ್ಪಿತಾ
Published on

ಪಾಂಡವಪುರ: ತಾಲೂಕಿನ ದೇಶವಳ್ಳಿ ಗ್ರಾಮದ ಯುವತಿ ಕಾಣೆಯಾಗಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ.ಯು.ಅರ್ಪಿತಾ (19) ಕಾಣೆಯಾದ ಯುವತಿ. ಜ.3 ರಂದು ಬೆಳಗ್ಗೆ 10ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವಳು ಈವರೆಗೂ ಹಿಂದಿರುಗಿಲ್ಲ. ಅಲ್ಲದೆ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಆಕೆಯ ತಂದೆ ಉಮೇಶ್ ಠಾಣೆಗೆ ನೀಡಿರುವ ದುರಿನಲ್ಲಿ ತಿಳಿಸಿದ್ದಾರೆ.

ಚಹರೆ : 4.6 ಅಡಿ ಎತ್ತರ, ಗುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ ಹೊಂದಿದ್ದು, ಕಾಣೆಯಾದ ದಿನ ಸಿಮೆಂಟ್ ಕಲ್ಲರ್ ಟಾಪ್, ಕಪ್ಪು ಕಲ್ಲರ್ ಪ್ಯಾಂಟ್ ಹಾಗೂ ಶೂ ಧರಿಸಿದ್ದಳು. ಈಕೆಯ ಬಗ್ಗೆ ಮಾಹಿತಿ ದೊರೆತರೆ ಪಾಂಡವಪುರ ಪೊಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ (08232-224200, 08236-255131) ಮಾಹಿತಿ ನೀಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net