ಅಬ್ದುಲ್ ರೌಫ್ ಮುಶೀರ್ ಪತ್ತೆಗೆ ಮನವಿ

ಅಬ್ದುಲ್ ರೌಫ್ ಮುಶೀರ್ (45)  ನಾಪತ್ತೆ
ಅಬ್ದುಲ್ ರೌಫ್ ಮುಶೀರ್ (45) ನಾಪತ್ತೆ
Published on

ಚನ್ನರಾಯಪಟ್ಟಣ: ಬೆಂಗಳೂರಿನಿಂದ ಅತ್ತೆ ಮನೆಗೆಂದು ಚನ್ನರಾಯಪಟ್ಟಣಕ್ಕೆ ಬಂದಿದ್ದ ಅಬ್ದುಲ್ ರೌಫ್ ಮುಶೀರ್ (45) ನಾಪತ್ತೆಯಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಅತ್ತೆ ಮನೆಗೆಂದು ಬಂದಿದ್ದ ಅಬ್ದುಲ್ ರೌಫ್ ಮುಶೀರ್, ಹೊರಗೆ ಹೋಗಿ ಬರುತ್ತೇನೆಂದು ತಿಳಿಸಿ ಹೋದವರು ಈವರೆಗೂ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿಲಾಗಿದೆ.

ಚಹರೆ: 5.3 ಅಡಿ ಎತ್ತರ, ಗುಂಡು ಮುಖ, ದೃಢಕಾಯ ಶರೀರ, ಗೋಧಿ ಮೈಬಣ್ಣ, ಕನ್ನಡ ಮತ್ತು ಉರ್ದು ಭಾಷೆ ಬಲ್ಲವರಾಗಿದ್ದು, ಮನೆಯಿಂದ ಹೊರ ಹೋಗುವಾಗ ಕೆಂಪು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಸುಳಿವು ಕಂಡು ಬಂದಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ 08176 -252333 , ನಗರ ಠಾಣಾ ಸಿಪಿಐ ಮೊ. 9480804767, ನಗರ ಠಾಣಾ ಪಿಎಸೈ ಮೊ:9480804779 ಅಥವಾ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net