ಕಾಲೇಜಿನ ಸಮಯಕ್ಕೆ ಬಸ್ ಬಿಡಲು ಮನವಿ

Abvp protest
Published on

ಹಿರೇಕೆರೂರ: ಕಾಲೇಜಿನ ಆರಂಭದ ಸಮಯಕ್ಕೆ ತಕ್ಕಂತೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಎಬಿವಿಪಿ ವತಿಯಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಎಬಿವಿಪಿ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ಶೈಕ್ಷಣಿಕ ವರ್ಷದ ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್ ಪಾಸ್ ವಿತರಣೆ ಮಾಡಬೇಕು. ಶಾಲಾ- ಕಾಲೇಜುಗಳ ಸಮಯಕ್ಕೆ ಅನುಗುಣವಾಗಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ವಾಕರಸಾ ಸಂಸ್ಥೆಯ ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ ಅವರಿಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ತಾಲೂಕು ಸಂಚಾಲಕ ಮನೋಜ ಕಲಕೊಪ್ಪ, ಪ್ರವೀಣ ಕಡೂರ, ನಗರ ಸಂಚಾಲಕ ವಿಕಾಸ ಹಿರೇಕೆರೂರ, ಮಾರುತಿ ಕಲಾಲ, ಹೇಮಂತ ಗುಬ್ಬೇರ್, ಸಾಗರ ಕಲಾಲ, ರುದ್ರೇಶ ಕವಲತ್ತೇರ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net